ಬಂಟ್ವಾಳ ರೋಟರಿ ಕ್ಲಬ್ ಆಶ್ರಯದಲ್ಲಿ ಒಂದು ದಿನದ ನಾಟಕೋತ್ಸವ ದ.15 ರ ಶನಿವಾರ ಬಿ.ಸಿ.ರೋಡಿನಲ್ಲಿ ನಡೆಯಲಿದೆ. ಇದಕ್ಕೆ ದ.ಕ. ಜಿಲ್ಲೆ ಮತ್ತು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗ ನೀಡಲಿದೆ.
ಸಂಜೆ 6 ಗಂಟೆಗೆ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ, ಮೌನೇಶ ವಿಶ್ವಕರ್ಮ ನಿರ್ದೇಶನದ “ಡಿಜಿಟಲ್ ಮಾಯೆ” ಹಾಗೂ 7 ರಿಂದ ವಾರ್ತಾ ಇಲಾಖೆಯ ಗಾಂಧಿ ರಂಗಪಯಣ 150 ತಂಡದಿಂದ ಬೊಳುವಾರು ಮಹಮ್ಮದ್ ಕುಂಞಿಯವರ ಕೃತಿ ಆಧಾರಿತ “ಪಾಪು-ಬಾಪು” ನಾಟಕವು ಡಾ.ಶ್ರೀಪಾದ ಭಟ್ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭ ಗಾಂಧಿ ಬದುಕಿನ ಘಟ್ಟಗಳನ್ನು ಮನವರಿಕೆ ಮಾಡುವ ಛಾಯಾಚಿತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ನಾಟಕಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…