ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ವಿಟ್ಲ ಸಮೀಪದ ಚಂದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಪ್ರತಿದಿನವೂ ಶೈಕ್ಷಣಿಕ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಡಿ.9ರಂದು ಬೆಳಗ್ಗೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶೇಖರ ಗೌಡ ಕಾಯರ್‌ಮಾರು ಧ್ವಜಾರೋಹಣ ನೆರವೇರಿಸಿದರು. ಗ್ರಾಮ ಸಮೀಕ್ಷೆಗಾಗಿ ವಿಟ್ಠಲ ವಿದ್ಯಾ ಸಂಘದ ಸದಸ್ಯ ಪದ್ಮಯ್ಯ ಗೌಡ ಅವರು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ನಾಲ್ಕು ಗುಂಪುಗಳಾಗಿ ವಿಂಗಡಿಸಿ, ನಾಲ್ಕು ರಸ್ತೆಗಳಲ್ಲಿ ತೆರಳಿ ಮಾಹಿತಿ ಕಲೆಹಾಕಿದರು. ನಿಯರಿತಾ ಸ್ವಾಗತಿಸಿ, ವೀನಾ ವಂದಿಸಿದರು. ಜಾಹ್ನವಿ ನಿರೂಪಿಸಿದರು.
ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ಬದನಾಜೆ ಅಧ್ಯಕ್ಷತೆ ವಹಿಸಿದ್ದರು. ವಿಟ್ಲದ ಬಂಟ್ವಾಳ ತಾ| ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಮೋಹನ್ ಕಾಯರ್‌ಮಾರ್ ಅವರು ಹೈನುಗಾರಿಕೆ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಯುವಕೇಸರಿ ಅಬೀರಿ ಅತಿಕಾರಬಲು ಅಧ್ಯಕ್ಷ ಸುಶಾಂತ್ ಸಾಲಿಯಾನ್ ಚಂದಳಿಕೆ, ವಿಟ್ಲಮುಡ್ನೂರು ಗ್ರಾ.ಪಂ.ಸದಸ್ಯ ಮಹಾಬಲೇಶ್ವರ ಭಟ್ ಆಲಂಗಾರು, ಗೋವಿಂದ ಭಟ್ ಕಜೆಹಿತ್ತಿಲು, ವಿಟ್ಲ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಪೆಲತ್ತಡ್ಕ, ಶಿಲ್ಪಾ ಫರ್ನಿಚರ್‍ಸ್ ಮಾಲಕ ನರೇಂದ್ರ ಸಿ., ಎಸ್‌ಡಿಎಂಸಿ ಸದಸ್ಯ ಕೆ.ಎಚ್.ಪ್ರವೀಣ್ ಕುಮಾರ್, ಜಯರಾಮ್ ನಿಡ್ಯ, ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಎ., ಮುಖ್ಯ ಶಿಬಿರಾಧಿಕಾರಿ ಅಶೋಕ್ ಎಸ್. ಮತ್ತಿತರರು ಉಪಸ್ಥಿತರಿದ್ದರು. ಸ್ನೇಹಾ ಸ್ವಾಗತಿಸಿ, ಗಾಯತ್ರಿ ವಂದಿಸಿದರು. ಸುಶ್ಮಿತಾ ನಿರೂಪಿಸಿದರು.
ಡಿ.10ರಂದು ಬೆಳಗ್ಗೆ ಯುವಕೇಸರಿ ಅಬೀರಿ ಅತಿಕಾರಬಲು ಗೌರವ ಸಲಹೆಗಾರ ವಿಟ್ಠಲ ಪೂಜಾರಿ ಅತಿಕಾರಬಲು ಧ್ವಜಾರೋಹಣ ನೆರವೇರಿಸಿದರು. ಶೈಕ್ಷಣಿಕ ಕಾರ್ಯಕ್ರಮದಲ್ಲಿ ಶುಭಾಂಗಿ ಪದ್ಮರಾಜ್ ಶಿಂಧೆ ಅವರು ವಸ್ತು ಕೌಶಲ್ಯದ ಬಗ್ಗೆ ತರಬೇತಿ ನೀಡಿದರು. ಚಂದಳಿಕೆ ಶಾಲೆ ಶಿಕ್ಷಕಿ ಪುಷ್ಪಾವತಿ ಉಪಸ್ಥಿತರಿದ್ದರು. ಶ್ರೇಯಾ ಸ್ವಾಗತಿಸಿ, ಹಿತಾಕ್ಷಿ ವಂದಿಸಿದರು. ವೆಂಕಟೇಶ್ ಕೆ.ಎಂ. ನಿರೂಪಿಸಿದರು.
ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಮಜಿ ಶಾಲೆ ಮುಖ್ಯೋಪಾಧ್ಯಾಯ, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಸ್.ಕೆ.ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್ ವೈದ್ಯಾಽಕಾರಿ ಡಾ.ಗೀತಪ್ರಕಾಶ್ ಸಾಮಾಜಿಕ ಸ್ವಾಸ್ಥ ರಕ್ಷಣೆ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಲೋಕೇಶ್ ವಿಟ್ಲ, ನಿವೃತ್ತ ಶಿಕ್ಷಕ ಬಿ.ಶ್ಯಾಮ ಭಟ್, ಕಡೇಶಿವಾಲಯ ಸರಕಾರಿ ಶಾಲೆ ಶಿಕ್ಷಕ ಶಿವರಾಮ ಭಟ್, ಮುಖ್ಯ ಶಿಬಿರಾಽಕಾರಿ ಅಶೋಕ್ ಎಸ್. ಮತ್ತಿತರರು ಉಪಸ್ಥಿತರಿದ್ದರು. ಅನುಷಾ ಸ್ವಾಗತಿಸಿ, ರಶ್ಮಿ ವಂದಿಸಿದರು. ಸ್ವಾತಿ ಎಂ.ಆರ್. ನಿರೂಪಿಸಿದರು.
ಡಿ.11ರಂದು ಬೆಳಗ್ಗೆ ಚಂದಳಿಕೆ ವಿದ್ಯಾವರ್ಧಕ ಸಂಘದ ಸದಸ್ಯ ಶ್ರೀನಿವಾಸ ಚಂದಳಿಕೆ ಧ್ವಜಾರೋಹಣ ನೆರವೇರಿಸಿದರು. ಶೈಕ್ಷಣಿಕ ಕಾರ್ಯಕ್ರಮದಲ್ಲಿ ನ್ಯಾಯವಾದಿ ಮೋಹನ ಎ.ಮೈರ ಅವರು ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನೀಡಿದರು. ನ್ಯಾಯವಾದಿ ಗೋವಿಂದಮೂರ್ತಿ, ಚಂದಳಿಕೆ ವಿದ್ಯಾವರ್ಧಕ ಸಂಘದ ಸದಸ್ಯ ಸನತ್ ಚಂದಳಿಕೆ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಒಕ್ಕೂಟದ ಅಧ್ಯಕ್ಷ ಜನಾರ್ದನ ಪದ್ಮಶಾಲಿ, ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಎ., ಮುಖ್ಯ ಶಿಬಿರಾಧಿಕಾರಿ ಅಶೋಕ್ ಎಸ್. ಮತ್ತಿತರರು ಉಪಸ್ಥಿತರಿದ್ದರು. ಸುಶ್ಮಿತಾ ಸ್ವಾಗತಿಸಿ, ಕಾರ್ತಿಕ್ ವಂದಿಸಿದರು. ಸ್ನೇಹಾ ನಿರೂಪಿಸಿದರು.
ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ . ಚಂದಳಿಕೆ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಾಸುದೇವ, ವಿಟ್ಲ ಹವ್ಯಕ ವಲಯ ದಿಗ್ದರ್ಶಕ ಸತೀಶ ಪಂಜಿಗದ್ದೆ, ನಿವೃತ್ತ ಸೈನಿಕ ಹರೀಶ್ ಶೆಟ್ಟಿ, ತ್ರಿಶೂಲ್ ಫ್ರೆಂಡ್ಸ್ ಅಧ್ಯಕ್ಷ ಮಹೇಶ್ ಭಂಡಾರಿ ಕಲ್ಲಕಟ್ಟ, ಚಂದಳಿಕೆ ಮುದೂರೂ ಫ್ರೆಂಡ್ಸ್ ಅಧ್ಯಕ್ಷ ಕೃಷ್ಣ ಮುದೂರು, ಚಂದಳಿಕೆ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ನೋಣಯ್ಯ ಪೂಜಾರಿ, ಭವಾನಿ ಸ್ಯಾನಿಟರಿ ಮಾಲಕ ಗಂಗಾಧರ ಸಿ., ಮುಖ್ಯ ಶಿಬಿರಾಽಕಾರಿ ಅಶೋಕ್ ಎಸ್. ಮತ್ತಿತರರು ಉಪಸ್ಥಿತರಿದ್ದರು. ಅರ್ಪಿತಾ ಸ್ವಾಗತಿಸಿ, ಸ್ವಾತಿ ವಂದಿಸಿದರು. ಜಾಹ್ನವಿ ನಿರೂಪಿಸಿದರು.