ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಹಾಗೂ ಪಕ್ಷದ ಮುಖಂಡರ ಸಭೆಯು ಇಲ್ಲಿನ ಪಕ್ಷದ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಪಕ್ಷದ ಬಲವರ್ಧನೆಯ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಮಮತಾ ಗಟ್ಟಿ ಸಲಹೆ ನೀಡಿದರು
ಮುಂದಿನ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗುವಂತೆ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಹೇಳಿದರು.
ಸಭೆಯಲ್ಲಿ ಬಂಟ್ವಾಳ ಬ್ಲಾಕ್ ಉಸ್ತುವಾರಿಗಳಾದ ವಿಜಯ್ ಕುಮಾರ್ ರೈ, ಆರಿಫ್ ಬಾವಾ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಬಂಟ್ವಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾ ವಿ.ಶೆಟ್ಟಿ, ತಾಪಂ ಸದಸ್ಯೆ ಧನಲಕ್ಷ್ಮಿ ಸಿ ಬಂಗೇರ, ಮಂಜುಳಾ ಸದಾನಂದ, ರತ್ನಾವತಿ ಜಯರಾಮ ಶೆಟ್ಟಿ, ಪದ್ಮಾವತಿ ಬಿ. ಬಂಗೇರ, ಬೇಬಿ ಕೃಷ್ಣಪ್ಪ, ಪುರಸಭಾ ಸದಸ್ಯರಾದ ಬಿ. ವಾಸು ಪೂಜಾರಿ, ಜನಾರ್ದನಾ ಚೆಂಡ್ತಿಮಾರ್, ಗಂಗಾಧರ ಪೂಜಾರಿ, ಘಟಕದ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಎಂ.ಬಿ. ಅಶ್ರಫ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಜಗದೀಶ್ ಕೊಯಿಲ, ಮಾಜಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಡಿಸಿಸಿ ಸದಸ್ಯ ಪ್ರೇಮ್ ಸಿಕ್ವೇರಾ, ಪ್ಲೋಸಿ ಡಿಸೋಜ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಸಂಪತ್ ಕುಮಾರ್ ಶೆಟ್ಟಿ, ಜಯಂತಿ ಪೂಜಾರಿ, ಅಬ್ಬಾಸ್ ಅಲಿ,ಸುದೀಪ್ ಕುಮಾರ್ ಶೆಟ್ಟಿ, ಕೆ.ಎ. ಸತೀಶ್ಚಂದ್ರ, ಮಹಾಬಲ ಬಂಗೇರಾ, ಜಗದೀಶ್ ಕುಂದರ್, ಶಿವಪ್ಪ ಪೂಜಾರಿ, ಡಾ. ಸೇರಾ ಕಾಂಚಲಾಕ್ಷಿ, ಗ್ರಾಮ ಪಂಚಾಯತ್ ಸದಸ್ಯರು, ವಲಯ ಅಧ್ಯಕ್ಷರು ಹಾಗೂ ಬೂತ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.