ಬಂಟ್ವಾಳ

ವಸ್ತುಸಂಗ್ರಹಾಲಯಗಳು ಸಾಂಸ್ಕೃತಿಕ ರಾಯಭಾರಿಗಳು: ಡಾ ಡಾನಿಯಲ್ ಡಿ ಸಿಮೊನ್

ಭಾರತದ ವಸ್ತು ಸಂಗ್ರಹಾಲಯಗಳು ನಮ್ಮ ಸಾಂಸ್ಕೃತಿಕ ರಾಯಭಾರಿಗಳು. ಇಲ್ಲಿ ಅತ್ಯುತ್ತಮ ಮ್ಯೂಸಿಯಂಗಳಿದ್ದು ಇವುಗಳ ಮೂಲಕ ಇತಿಹಾಸ ದರ್ಶನವಾಗುತ್ತದೆ ಎಂದು ಲಂಡನಿನ್ನ ಬ್ರಿಟಿಷ್ ಮ್ಯೂಸಿಯಂನ ಪ್ರೋಜೆಕ್ಟ್ ಕ್ಯೂರೇಟರ್ ಡಾ ಡಾನಿಯಲ್ ಡಿ ಸಿಮೊನ್ ಹೇಳಿದರು.

ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ಪ್ರಾದೇಶಿಕ ವೈವಿಧ್ಯ, ಭಾಷೆಗಳನ್ನು ವಸ್ತು ಸಂಗ್ರಹಾಲಯ ತಿಳಿಸುತ್ತದೆ, ನಮಗಾಗಿಯಾದರೂ ಇತಿಹಾಸವನ್ನು ಅರಿಯಬೇಕು ಎಂದರು.

ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ. ಬಿ.ಎ.ವಿವೇಕ ರೈ ಭಾರತದ ಮೂಲ ಸಂಸ್ಕೃತಿಯ ವಿಚಾರ ವೈವಿಧ್ಯಗಳ ಕುರಿತು ಮಾಹಿತಿ ನೀಡಿದರು. ಸಮನ್ವಯಕಾರರಾಗಿ ಡಾ. ಎಂ. ಪ್ರಭಾಕರ ಜೋಷಿ ಮಾತನಾಡಿ ವಸ್ತು ಸಂಗ್ರಹಾಲಯ ಒಳಹೊಕ್ಕ ವ್ಯಕ್ತಿ ಹೊಸ ಮನುಷ್ಯನಾಗಿ ಹೊರ ಬರುತ್ತಾನೆ, ಇಂದು ಮ್ಯೂಸಿಯಂಗಳಲ್ಲಿ ಸಂಗ್ರಹವಾಗಿರುವುದಕ್ಕಿಮದ ಅಕ ವಸ್ತುಗಳು ಹೊರ ಪ್ರಪಂಚದಲ್ಲಿದೆ ಎಂದರು.

ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಉಪಸ್ಥಿರಿದ್ದು ಮಾರ್ಗದರ್ಶನ ನೀಡಿದರು. ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕರಾಮ ಪೂಜಾರಿ ಸ್ವಾಗತಿಸಿದರು, ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಪ್ರಾಸ್ತವಿಕವಾಗಿ ಮಾತನಾಡಿ ವಂದಿಸಿದರು. ಎಸ್‌ಡಿಎಂ, ಬೆಸೆಂಟ್, ಆಳ್ವಾಸ್, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.

ವಸ್ತು ಸಂಗ್ರಹಾಲಯಕ್ಕೆ ಭೇಟಿ:

ಸಂಗ್ರಹಾಲಯದ ಎಲ್ಲಾ ವಿಭಾಗಗಳನ್ನು ವೀಕ್ಷಿಸಿದ ಡಾ. ಡಾನಿಯಲ್ ತುಳು ಬದುಕನ್ನು ಸಮಗ್ರವಾಗಿ ಕಟ್ಟಿಕೊಡುವ ಒಂದು ಅದ್ಭುತವಾದ ಸಂಗ್ರಹಾಲಯವೆಂದು ಶ್ಲಾಘಿಸಿದರು. ಸಂಗ್ರಹಾಲಯದಲ್ಲಿರುವ ಟೆರ್ರಕೋಟ ವಸ್ತುಗಳ ಅಧ್ಯಯನಕ್ಕೆ ಬಂದಿರುವ ಅವರು ಪ್ರತಿಯೊಂದು ವಸುಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಧ್ಯಯನ ನಡೆಸಿದರು. ಸುಮಾರು ನಾಲ್ಕುನೂರು ವರ್ಷಗಳ ಇತಿಹಾಸವಿರುವ ಪಂಜುರ್ಲಿ ದೈವದ ಮಣ್ಣಿನ  ಮೂರ್ತಿಗಳನ್ನು ಮುಖ್ಯವಾಗಿ ಪರಿಶೀಲಿಸಿದರು. ಗಂಥಾಲಯಕ್ಕೆ ಬೇಟಿ ನೀಡಿದ ಅವರು ಅಲೂಪರ ಕುರಿತ ವಿವರಣೆ ಇರುವ ಭಾಸ್ಕರಾನಂದ ಸಾಲೆತ್ತೂರರ ಏನ್ಸ್ಂಟ್ ಕರ್ನಾಟಕ ಹಿಸ್ಟ್ರಿ ಆಫ್ ತುಳುವಾಸ್ ಹಾಗೆಯೆ ಪಾದೂರು ಗುರುರಾಜ ಭಟ್ಟರ ಮತ್ತು ಡಾ ಕೆ.ವಿ ರಮೇಶರ ಗ್ರಂಥಗಳನ್ನು ಪರಮಾರ್ಶಿಸಿದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ