ಪೊಲೀಸ್ ಇಲಾಖೆ ಹೇಗೆ ಕಾರ್ಯವೈಖರಿ ಮಾಡುತ್ತದೆ, ಕಂದಾಯ ಇಲಾಖೆ ಹೇಗಿರುತ್ತದೆ, ನ್ಯಾಯಾಲಯದ ಕಲಾಪ ಹೇಗಿದೆ, ಶಾಸಕರ ಕರ್ತವ್ಯವೇನು ಎಂಬ ಸಂದೇಹಗಳು ಮೂಡುವುದು ಸಹಜ. ಮಕ್ಕಳಲ್ಲಿ ಇದರ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಬಂಟ್ವಾಳ ತಾಲೂಕು ಮಕ್ಕಳ ಹಕ್ಕುಗಳ ಸಂಚಲನಾ ಸಮಿತಿ, ಶಿಕ್ಷಣ ಸಂಪನ್ಮೂಲ ಕೇಂದ್ರ ಗಳ ಒಕ್ಕೂಟ ಸಹಭಾಗಿತ್ವ ದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ ಅಂಗವಾಗಿ ಮದ್ವ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಶುಕ್ರವಾರ ಈ ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು.
ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ ಕಚೇರಿಗೆ ಅಗಮಿಸಿ ದ ಮಕ್ಕಳು ಅವರೊಂದಿಗೆ ಇಲಾಖೆ ಯ ಪ್ರಮುಖ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ನ್ಯಾಯಾಲಯದ ಲ್ಲಿ ನಡೆಯುವ ಕಲಾಪಗಳ ಬಗ್ಗೆ ಕುಳಿತು ಆಲಿಸಿ ಬಂಟ್ವಾಳ ಪೋಲೀಸ್ ಉಪವಿಭಾಗ ಕಚೇರಿಗೆ ಆಗಮಿಸಿದರು. ಅಲ್ಲಿ ಎ.ಎಸ್.ಪಿ.ಭಗವಾನ್ ಹ್ರಷಿಕೇಶ್ ಸೋನಾವಣೆ ಜೊತೆ ಠಾಣೆಯ ಮಾಹಿತಿ ಪಡೆದು, ಠಾಣೆಯಲ್ಲಿರುವ ವ್ಯವಸ್ಥೆ ಗಳನ್ನು ಕಂಡರು. ಬಳಿಕ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಕಚೇರಿಗೆ ತೆರಳಿ ಶಾಸಕರೊಂದಿಗೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಷಯಗಳ ಬಗ್ಗೆ ಮಾಹಿತಿ ಪಡೆದರು.ಈ ಸಂಧರ್ಭದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣಾ ಸಮಿತಿ ಸಂಚಾಲಕ ಮಂಜು ವಿಟ್ಲ, ಸಹಸಂಚಾಲಕ ಫಾರೂಕ್ ಬಂಟ್ವಾಳ, ಪಡಿ ಸಂಸ್ಥೆ ಯ ಸಂಯೋಜಕಿ ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.