ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಸಂಕಲ್ಪವನ್ನು ಕೈಗೊಂಡು ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಮೈರ ಎಂಬಲ್ಲಿನ ಶ್ರೀರಾಮಾಂಜನೇಯ ಗೆಳೆಯರ ಬಳಗ ಬುಧವಾರ ರುದ್ರಯಾಗವನ್ನು ಮೈರ ಭಜನಾ ಮಂದಿರದಲ್ಲಿ ನಡೆಸಿತು.
ಗೆಳೆಯರ ಬಳಗದ ನಾಲ್ಕನೇ ವರ್ಷದ ಶ್ರೀ ರಾಮಾಂಜನೇಯ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವದ ನಿಮಿತ್ತ ಬುಧವಾರ ವೇ.ಮೂ. ಕಾರಿಂಜ ಕೊಡಂಬೆಟ್ಟು ರಾಘವೇಂದ್ರ ಭಟ್ ಪೌರೋಹಿತ್ಯದಲ್ಲಿ ನಡೆದ ಯಾಗದ ಪೂರ್ಣಾಹುತಿ ಸಂದರ್ಭ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದು, ಮೋದಿಯವರು ಅಧಿಕಾರಕ್ಕೆ ಮತ್ತೆ ಬರಬೇಕು ಎಂಬ ಪ್ರಾರ್ಥನೆ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಹಿಸಿದ್ದರು. ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ ದಿಕ್ಸೂಚಿ ಭಾಷಣ ಮಾಡಿದರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೇಶ ಶೆಟ್ಟಿ, ತಾಪಂ ಸದಸ್ಯ ಪ್ರಭಾಕರ ಪ್ರಭು, ಮಂಗಳೂರಿನ ಉದ್ಯಮಿ ಪ್ರಮೋದ್ ಕುಮಾರ್ ಕುರುವರಗೋಳಿ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಸಾಲ್ಯಾನ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುದರ್ಶನ ಬಜ, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಸಂಘದ ಅಧ್ಯಕ್ಷ ಉಮೇಶ ಪೂಜಾರಿ ನೇರ್ಲಪಲ್ಕೆ, ಪ್ರಮುಖರಾದ ನಾರಾಯಣ ಪೂಜಾರಿ ಬೊಳ್ಳುಕಲ್ಲು, ಚಿದಾನಂದ ರೈ ಕಕ್ಯ, ಕುಸುಮಾಧರ ಉರ್ಕಿ, ಪಂಚಾಯತ್ ಸದಸ್ಯ ಧನಂಜಯ ಶೆಟ್ಟಿ ಸರಪಾಡಿ, ಸುರೇಶ್ ಕೋಟ್ಯಾನ್ ನರಿಕೊಂಬು, ಸುರೇಶ್ ಮೈರ, ಚೇತನ್ ಉರ್ದೊಟ್ಟು, ರೇವತಿ, ಗುಲಾಬಿ ಉಪಸ್ಥಿತರಿದ್ದರು. ಬಲಿಷ್ಠ ಭಾರತ ನಿರ್ಮಿಸಲು ಶ್ರೀರಾಮಾಂಜನೇಯ ದೇವರ, ಶ್ರೀ ಕಾರಿಂಜೇಶ್ವರ ದೇವರ ಮತ್ತು ಮೈರ ಶ್ರೀ ಮಹಾಕಾಳಿ ಅಮ್ಮನವರ ಅನುಗ್ರಹ ಪ್ರಧಾನಿಗೆ ಇರಲೆಂಬ ಆಶಯದಲ್ಲಿ ಎಲ್ಲರೂ ಒಟ್ಟಾಗಿ ಈ ಯಾಗ ನೆರವೇರಿಸಲಾಗಿದೆ ಎಂದು ಗೆಳೆಯರ ಬಳಗದ ಮಾಜಿ ಅಧ್ಯಕ್ಷ ರಂಜಿತ್ ಮೈರ ಸ್ವಾಗತ ಭಾಷಣದಲ್ಲಿ ತಿಳಿಸಿದರು. ಭವಿತ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ 610 ಅಂಕ ಗಳಿಸಿದ ಪ್ರಿಯಾಂಕ ಮಾಮಾಯಿ ಅವರನ್ನು ಅಭಿನಂದಿಸಲಾಯಿತು.