ಯಕ್ಷಗಾನ

ಮೇಲ್ಕಾರ್ ನಲ್ಲಿ 15ರಿಂದ 21ರವರೆಗೆ ಯಕ್ಷಗಾನ ಸಪ್ತಾಹ

ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ವತಿಯಿಂದ ಬಂಟ್ವಾಳ ತಾಲೂಕಿನ ಮೇಲ್ಕಾರ್ ಆರ್.ಕೆ.ಎಂಟರ್ ಪ್ರೈಸಸ್ ಎದುರು ನಡೆಯಲಿರುವ ಯಕ್ಷಗಾನ ಸಪ್ತಾಹದ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಕಸಾಪ ಕನ್ನಡ ಭವನ ಸಮಿತಿ ಅಧ್ಯಕ್ಷ ಕೊಳಕೆ ಗಂಗಾಧರ ಭಟ್ ಮತ್ತು ನಾಗೇಶ್ ರಾವ್ ಆಮಂತ್ರಣ ಬಿಡುಗಡೆಗೊಳಿಸಿದರು. ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಪ್ರಮುಖರಾದ ಕೃಷ್ಣ ಶರ್ಮ ಈ ಸಂದರ್ಭ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಕೈಯೂರು ನಾರಾಯಣ ಭಟ್, ಡಿ.15ರಂದು ಯಕ್ಷಗಾನ ಕಾರ್ಯಕ್ರಮ ಸಂಜೆ 6ಕ್ಕೆಆರಂಭಗೊಳ್ಳಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. 21ರಂದು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ್ ವಹಿಸುವರು. 15ರಂದು ಗಿರಿಜಾ ಕಲ್ಯಾಣ  ತಾರಕಾಸುರ ವಧೆ, 16ರಂದು ಶರಸೇತು, ಸುಭದ್ರಾ ಕಲ್ಯಾಣ, 17ರಂದು ಕನಕಾಂಗಿ ಕಲ್ಯಾಣ, 18ರಂದು ಅತಿಕಾಯ ಇಂದ್ರಜಿತು, 19ರಂದು ಮಾಗಧ ವಧೆ, ಪುರುಷಾಮೃಗ, ರಕ್ತರಾತ್ರಿ, 20ರಂದು ವಸ್ತ್ರಾಪಹಾರ, ಗದಾಪರ್ವ, 21ರಂದು ದ್ರೌಪದಿ ಪ್ರತಾಪ ಪ್ರಸಂಗಗಳು ಸಂಜೆ 6.30ರಿಂದ ರಾತ್ರಿ 10.30ರವರೆಗೆ ಪ್ರದರ್ಶನಗೊಳ್ಳಲಿರುವುದಾಗಿ ಮಾಹಿತಿ ನೀಡಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ