ಪುಂಜಾಲಕಟ್ಟೆ

ಯುವಕರಿಗೆ ಕೃಷಿಯಲ್ಲಿಯೂ ಸಾಧನೆಗೆ ಅವಕಾಶ: ಶಾಸಕ ರಾಜೇಶ್ ನಾಯ್ಕ್

ಯುವಕರಿಗೆ ಇಂದು ಕೃಷಿಯಲ್ಲಿಯೂ ಪ್ರಯೋಗಗಳ ಮೂಲಕ ಸಾಧನೆಗೆ ಸಾಕಷ್ಟು ಅವಕಾಶಗಳಿದೆ ಎಂದು ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ಜಾಹೀರಾತು

ಸರಪಾಡಿ ಯುವಕ ಮಂಡಲದ ನೂತನ ಅಡುಗೆ ಕೊಠಡಿ ಉದ್ಘಾಟನೆ, ದಿ| ಪಟ್ಲಕೆರೆ ನಾರಾಯಣ ಶಾಂತಿ ಸಭಾಂಗಣಕ್ಕೆ ಶಿಲಾನ್ಯಾಸ ಹಾಗೂ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಸಹಯೋಗದ ಕಬಡ್ಡಿ ಪಂದ್ಯಾಟದ ಸಂದರ್ಭ ಅಡುಗೆ ಕೊಠಡಿಯನ್ನು ಉದ್ಘಾಟಿಸಿದರು.

ಸರಪಾಡಿ ಗ್ರಾಮದ ಅಭಿವೃದ್ಧಿಯ ಕುರಿತು ತನಗೆ ಗ್ರಾಮಸ್ಥರಿಂದ ಸಾಕಷ್ಟು ಮನವಿಗಳಿದ್ದು, ಅದರ ಈಡೇರಿಕೆಗೆ ಪ್ರಯತ್ನ ಮಾಡುತ್ತೇನೆ. ಕಳೆದ ೬ ತಿಂಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಿದ್ದು, ಮುಂದೆಯೂ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡದೆ ಕೆಲಸ ಮಾಡುತ್ತೇನೆ. ಜತೆಗೆ ಸರಪಾಡಿ ಯುವಕ ಮಂಡಲದ ಸಾಮಾಜಿಕ ಕಾರ್ಯಗಳಿಗೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ಸಾಧಕ ಪ್ರತಿಭೆಗಳಾದ ರವಿ ಸಾಲಿಯಾನ್ ಹಾಗೂ ಸುಶ್ಮಿತಾ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ಗೀತಾ ಶ್ರೀಧರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮಹಾರಾಷ್ಟ್ರದ ಬಿಜೆಪಿ ಮುಂದಾಳು ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ, ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಚಲನಚಿತ್ರ ನಿರ್ಮಾಪಕ ಚಂದ್ರಹಾಸ ಶೆಟ್ಟಿ, ಜಿಲ್ಲಾ ಬಿಜೆಪಿ ಮುಂದಾಳು ರಾಜಗೋಪಾಲ ರೈ, ಬಂಟ್ವಾಳ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್, ಪ್ರಗತಿಪರ ಕೃಷಿಕ ನಾರಾಯಣ ಪೂಜಾರಿ ಬೊಳ್ಳುಕಲ್ಲು, ಸರಪಾಡಿ ಗ್ರಾ.ಪಂ.ಸದಸ್ಯ ದಯಾನಂದ ಶೆಟ್ಟಿ ಅಮೈ, ಸರಪಾಡಿ ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಮೊಕ್ತೇಸರ ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ ಆರುಮುಡಿ, ಗೌರವಾಧ್ಯಕ್ಷ ಕುಸುಮಾಕರ ಶೆಟ್ಟಿ ಕುರ್ಯಾಳ, ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ನೇಮಿರಾಜ ರೈ, ಜ್ಯೋತಿಷಿ ರತ್ನಾಕರ ಭಟ್ ಸರಪಾಡಿ, ಉದ್ಯಮಿಗಳಾದ ಪದ್ಮನಾಭ ಭಟ್ ಕಾಸರಗೋಡು, ಮಜೀದ್ ಕಾಸರಗೋಡು ಉಪಸ್ಥಿತರಿದ್ದರು.

ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು ಪ್ರಸ್ತಾವನೆಗೈದರು. ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಪಿ. ಸ್ವಾಗತಿಸಿ, ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಕೊಟ್ಟುಂಜ ವಂದಿಸಿದರು. ಕಾರ್ಯದರ್ಶಿ ಕಿರಣ್ ಸರಪಾಡಿ ನಿರ್ವಹಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.