ಸಮಗ್ರ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ, ಕಾನೂನು ಸೇವಾ ಸಮಿತಿ ಬಂಟ್ವಾಳ ಹಾಗೂ ವಕೀಲರ ಸಂಘ ಬಂಟ್ವಾಳ ಸಹಯೋಗದಲ್ಲಿ ವಿಕಲಚೇತನ ಮಕ್ಕಳ ವಿಶ್ವ ವಿಶೇಷ ಚೇತನರ ದಿನಾಚರಣೆ ಮತ್ತು ಪರಿಸರ ನಿರ್ಮಾಣ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ವಿಶೇಷ ಮಕ್ಕಳ ಅಭಿವೃದ್ಧಿ ಗಾಗಿ ಸರಕಾರದ ಅನುದಾನದ ಜೊತೆಗೆ ಸಂಘ ಸಂಸ್ಥೆಗಳು ಕೈಜೋಡಿಸಿ ದಾಗ ಅವರು ಮುಖ್ಯವಾಹಿನಿಗೆ ಬರಲು ಸಾಧ್ಯ ವಾಗಬಹುದು. ಇಂತಹ ಮಕ್ಕಳಲ್ಲಿ ಅನೇಕ ಪ್ರತಿಭೆಗಳಿವೆ ಅದನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸುವ ಕೆಲಸ ಬೇಕಾಗಿದೆ. ವಿಕಲ ಚೇತನ ಮಕ್ಕಳ ನ್ನು ಪ್ರತ್ಯೇಕ ಮಾಡದೆ ನಮ್ಮ ಜೊತೆಯಾಗಿ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ , ವಿಕಲ ಚೇತನ ಮಕ್ಕಳಿಗೆ ಕರುಣೆ ತೋರಿಸುವ ಬದಲು ಸ್ಥೈರ್ಯ ಕೊಡುವ ಕೆಲಸ ಮಾಡೋಣ. ಕೇವಲ ಒಂದು ದಿನದ ಆಚರಣೆಯಾಗದೆ ನಿತ್ಯ ಅವರ ಜೊತೆಯಾಗಿರೋಣ, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿಯೂ ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ದ್ದ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ಸರಕಾರ ಮತ್ತು ಲಯನ್ಸ್ ಕ್ಲಬ್ ನಂಥ ಸಮಾಜಮುಖಿ ಸಂಘಟನೆ ಗಳು ವಿಶೇಷ ಮುತುವರ್ಜಿಯಿಂದ ವಿಕಲಚೇತನ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದರು. ಮಗುವಿಗೆ ಶಕ್ತಿ ಸಾಮರ್ಥ್ಯ ವನ್ನು ತುಂಬುವ ಕೆಲಸ ನಾವೆಲ್ಲರೂ ಸೇರಿ ಮಾಡುವದರ ಜೊತೆ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡುವ ಎಂದರು.
ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ, ಹಕ್ಕು ಗಳನ್ನು ಅವರಿಗೆ ನೀಡಿ ನಮ್ಮ ಕರ್ತವ್ಯ ಗಳನ್ನು ಸರಿಯಾಗಿ ಪಾಲಿಸೋಣ, ಸಮಾಜ ಅವರ ಜೊತೆಯಲ್ಲಿ ಬೆರತು ಸಹಾಯ ಹಸ್ತ ನೀಡೋಣ ಎಂದು ಹೇಳಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ ಮಾತನಾಡಿ ಇಂತಹ ಮಕ್ಕಳ ಮನಸ್ಸು ಗೆದ್ದು , ಪ್ರೀತಿಯ ಜೊತೆ ಶಿಕ್ಷಣ ನೀಡುವ ಶಿಕ್ಷಕಿಯರಿಗೆ ವಿಶೇಷ ಅಭಿನಂದನೆ ಸಲ್ಲಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಆಚಾರ್ಯ, ವಕೀಲರ ಸಂಘದ ಅಧ್ಯಕ್ಷ ದೀಪಕ್ ಜೈನ್, ಲಯನೆಸ್ ಕ್ಲಬ್ ಅಧ್ಯಕ್ಷೆ ವ್ರಂದಾ ಕುಡ್ವ, ತಾಲೂಕು ಪಂಚಾಯತ್ ಇ.ಒ.ರಾಜಣ್ಣ, ಸಂಪನ್ಮೂಲ ವ್ಯಕ್ತಿ ನಿವ್ರತ್ತ ಪ್ರಾಧ್ಯಾಪಕ ರಾಜಮಣಿ ರಾಮಕುಂಜ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ರಮೇಶ್ ನಾಯಕ್ ರಾಯಿ, ಸಮಯನ್ವಯಾಧಿಕಾರಿ ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿ ಭಾಗ್ಯಶ್ರೀ ಮತ್ತು ಕೌಶಿಕ್ ನನ್ನು ಶಾಸಕರು ಸನ್ಮಾನಿದರು.
ವಿಕಲಚೇತನಮಕ್ಕಳಿಗೆ ಏರ್ಪಡಿಸಲಾಗಿದ್ದ ಕ್ರೀಡೆ ಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಪದಾಧಿಕಾರಿ ದಾಮೋದರ್ ವಂದಿಸಿದರು.ಬಿ.ಐ.ಇ.ಆರ್.ಟಿ ಸುರೇಖಾ ಕಾರ್ಯಕ್ರಮ ನಿರೂಪಿಸಿದರು.