ಬಂಟರ ಸಂಘ ಬಂಟವಾಳ ತಾಲೂಕು, ವಲಯ ಬಂಟರ ಸಂಘ ಸಜೀಪ ವಲಯ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಮಿತ್ತಮಜಲು ಗದ್ದೆಯ ಕ್ರೀಡಾಂಗಣದಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವ ಸಮಾರೋಪ ಸಮಾರಂಭ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಇದೊಂದು ವೇದಿಕೆಯಾಗಿದೆ. ಕ್ರೀಡಾಕ್ಷೇತ್ರ ದಲ್ಲಿ ಪರಸ್ಪರ ಪ್ರೀತಿಸುವ ಗುಣ ಮೈಗೂಡಿಸಿಕೊಂಡು ಮುನ್ನೆಡೆದಾಗ ಮಾತ್ರ ಕ್ರೀಡೆಯಲ್ಲಿ ಯಶಸ್ಬಿಯಾಗಲು ಸಾಧ್ಯ ಎಂದರು.
ಮುಂಬಯಿ ಕಾರ್ಪೊರೇಟರ್ ಸಂತೋಷ್ ಶೆಟ್ಟಿ ದಳಂದಿಲ, ಪ್ರಜಾ ಟಿ.ವಿ.ಮುಖ್ಯಸ್ಥ ಗುಣರಂಜನ್ ಶೆಟ್ಟಿ, ಅಶ್ವಿನ್ ಕುಮಾರ್ ರೈ, ಎ.ಜೆ.ಆಸ್ಪತ್ರೆ ಯ ಮುಖ್ಯಸ್ಥ ಡಾ. ಪ್ರಶಾಂತ್ ಮಾರ್ಲ, ಸುಪ್ರೀತ್ ಆಳ್ವ ಪೊನ್ನೋಡಿ, ಅರುಣ್ ಆಳ್ವ ಕಾಂತಾಡಿಗುತ್ತು, ಪ್ರಸಾದ್ ಶೆಟ್ಟಿ ಹುಬ್ಬಳ್ಳಿ,, ಮುಂಬಯಿ ಉದ್ಯಮಿ ಆನಂದ ರೈ ಮಾಡಂತಾಡಿಗುತ್ತು, ಕ್ಯಾಪ್ಟನ್ ಬ್ರಿಜೇಶ್ ಚೌಟ, ಉದ್ಯಮಿ ರಿತೇಶ್ ಶೆಟ್ಟಿ, ಉದ್ಯಮಿ ನಿತಿನ್ ಶೆಟ್ಟಿ, ಉದ್ಯಮಿ ಸಾಯಿ ಗಿರಿಧರ್ ಶೆಟ್ಟಿ, ಉದ್ಯಮಿ ಬಾಲಚಂದ್ರನ್, ಉದ್ಯಮಿ ಭಗವಾನ್ ದಾಸ್ ಭಂಡಾರಿ ಮುಂಬಯಿ, ಪುಣೆ ದೇವಿಪ್ರಸಾದ್ ಪೂಂಜಾ ಮತ್ತಿತರರು ಉಪಸ್ಥಿತರಿದ್ದರು
ಶಾಸಕ ರಾಜೇಶ್ ನಾಯ್ಕ್, ಮುಂಬಯಿ ಪನ್ದೇಲ್ ಕಾರ್ಪೋರೇಟರ್ ಸಂತೋಷ್ ಶೆಟ್ಟಿ ದಳಂದಿಲ ಸಹಿತ ಊರಿನ ಹಾಗೂ ಪರ ಊರಿನಿಂದ ಆಗಮಿಸಿ ಕ್ರೀಡಾಕೂಟ ಕ್ಕೆ ಸಹಕಾರ ನೀಡಿದ ಮಹನೀಯರನ್ನು ಗೌರವಿಸಲಾಯಿತು.
ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಹಾಗೂ ಆಯೋಜನೆಯಲ್ಲಿ ಸಹಕರಿಸಿದ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರನ್ನು ಮತ್ತು ಶ್ರೀಕಾಂತ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಫಲಿತಾಂಶ:
ವಲಯ ವಿಭಾಗದಲ್ಲಿ ಗುಂಪು ಸ್ಪರ್ಧೆ ಯಲ್ಲಿ ಭಾಗವಹಿಸಿ ವಿಜೇತರಾದ ವರು ಕಬಡ್ಡಿ ಪುರುಷರ ವಿಭಾಗದಲ್ಲಿ ವಿಟ್ಲ ವಲಯ ಪ್ರಥಮ, ಕಲ್ಲಡ್ಕ ವಲಯ ದ್ವಿತೀಯ, ತ್ರೋಬಾಲ್ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಿಸಿರೋಡ್ ವಲಯ, ದ್ವಿತೀಯ ಸರಪಾಡಿ, ವಾಲಿಬಾಲ್ ಪುರುಷ ವಿಭಾಗದಲ್ಲಿ ಸಜೀಪ, ದ್ವಿತೀಯ ಬಿಸಿರೋಡ್, ವಾಲಿಬಾಲ್ ಮಹಿಳೆಯರ ವಿಭಾಗದಲ್ಲಿ ಪ್ರಥಮ ಪರಂಗಿಪೇಟೆ, ದ್ವಿತೀಯ ಕಲ್ಲಡ್ಕ, ಹಗ್ಗ ಜಗ್ಗಾಟ ಪುರುಷರ ವಿಭಾಗ ಪ್ರಥಮ ಮಾಣಿ, ದ್ವಿತೀಯ ವಿಟ್ಲ, ಹಗ್ಗ ಜಗ್ಗಾಟ ಮಹಿಳೆಯರ ವಿಭಾಗ ಪ್ರಥಮ ಮಾಣಿ, ದ್ವಿತೀಯ ಪರಂಗಿಪೇಟೆ , ಹಾಗೂ ಸಮಗ್ರ ಪ್ರಥಮ ಪ್ರಶಸ್ತಿ ಯನ್ನು ಮಾಣಿ ಪಡೆದುಕೊಂಡರೆ ದ್ವಿತೀಯ ಸಮಗ್ರ ಪ್ರಶಸ್ತಿ ಕಲ್ಲಡ್ಕ ವಲಯ ಪಡೆದು ಕೊಂಡಿದೆ.