ಬಂಟ್ವಾಳ ತಾಲೂಕಿನ ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ವಾರ್ಷಿಕ ಹಬ್ಬವನ್ನು ಭಾನುವಾರ ಆಚರಿಸಲಾಯಿತು. ಪ್ರಧಾನ ಧರ್ಮಗುರುಗಳಾಗಿ ಬಂಟ್ವಾಳ ವಲಯ ಹಾಗೂ ಮೊಡಂಕಾಪು ಚರ್ಚ್ ನ ಧರ್ಮ ಗುರುಗಳಾದ ವಂ. ವಾಲ್ಟರ್ ಡಿಮೆಲ್ಲೊ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು.
ಲೋರೆಟ್ಟೊ ಚರ್ಚ್ ನ ಧರ್ಮಗುರುಗಳಾದ ವಂ.ಎಲಿಯಸ್ ಡಿಸೋಜಾ, ಫರಂಗಿಪೇಟೆ ಕಾಪುಚಿನ್ ಧರ್ಮಗುರುಗಳಾದ ವಂ.ಜೆರಾಲ್ಡ್ ಲೋಬೊ,ಆಗ್ರಾರ್ ಚರ್ಚ್ ನ ಧರ್ಮಗುರುಗಳು, ಬಾಂಬಿಲ್ ಚರ್ಚ್ ನ ಧರ್ಮಗುರುಗಳು ಹಾಗೂ ವಲಯದ ಧರ್ಮಗುರುಗಳು ಬಲಿಪುಜೆಯಲ್ಲಿ ಪಾಲ್ಗೊಂಡರು.
ವಾರ್ಷಿಕ ಸಂಭ್ರಮಕ್ಕೆ ಸಹಕರಿಸಿದ ಧಾನಿಗಳಿಗೆ ಗೌರವಪೂರ್ವಕ ವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು. ನವೆಂಬರ್ 29 ರಿಂದ ಡಿಸೆಂಬರ್1 ರ ವರೆಗೆ 3 ದಿವಸಗಳ ನೋವೇನಾ ಬಲಿಪುಜೆಯಲ್ಲಿ ನೂರಾರು ಭಕ್ತರು ಮೇಣದ ಬತ್ತಿಗಳನ್ನು ಉರಿಸಿ ಪಾಲ್ಗೊಂಡಿದ್ದರು. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಊರ ಪರವೂರ ಭಕ್ತರು ಪಾಲ್ಗೊಂಡರು.