pic: Kishor Peraje
ಬಂಟ್ವಾಳ ಬಂಟರ ಸಂಘದ ಆಯೋಜನೆಯಲ್ಲಿ ವಲಯ ಬಂಟರ ಸಂಘದ ಸಹಕಾರದೊಂದಿಗೆ ಬಂಟ್ವಾಳ ತಾಲೂಕು ಮಟ್ಟದ ಬಂಟರ ಕ್ರೀಡಾಕೂಟ ಸಜೀಪದ ಮಿತ್ತಮಜಲು ಗದ್ದೆಯಲ್ಲಿ ಭಾನುವಾರ ನಡೆಯಿತು.
pic: Kishor Peraje
ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಲೂನ್ ಹಾರಿಸುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಕ್ರೀಡೆಯಿಂದ ಪ್ರೀತಿ, ಮಿತ್ರತ್ವ ಮತ್ತು ಒಗ್ಗಟ್ಟು ಬೆಳೆಸಲು ಸಾಧ್ಯ. ಬಂಟ ಸಮುದಾಯದ ಎಲ್ಲರನ್ನೂ ಒಂದೇ ವೇದಿಕೆಯಡಿ ಕ್ರೀಡೆಯ ಮೂಲಕ ಒಗ್ಗೂಡಿಸುವ ಪ್ರಯತ್ನ ನಡೆಸಿದ್ದು, ಶಿಸ್ತು, ಸಂಯಮ ನೀತಿ, ನಿಯಮಗಳನ್ನು ಜೀವನದಲ್ಲೂ ಅಳವಡಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗುತ್ತದೆ ಎಂದರು.
ಆರಂಭದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ಕ್ರೀಡಾ ಧ್ವಜಾರೋಹಣ ನಡೆಸಿ ಧ್ವಜವಂದನೆಯನ್ನು ಅತಿಥಿಗಳು ಸ್ವೀಕರಿಸಿದರು.
ಬಂಟರ ಸಂಘದ ಸಜೀಪ ವಲಯ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಬರಂಗರೆ ಸದಾನಂದ ಪೂಂಜ, ಬಂಟರ ಸಂಘದ ಪ್ರಮುಖರಾದ ಕಾಂತಾಡಿಗುತ್ತು ಗಣೇಶ್ ನಾಯ್ಕ್, ಸಜೀಪಗುತ್ತು ಮುಂಡಪ್ಪ ಶೆಟ್ಟಿ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ, ಜಿ.ಪಂ.ಮಾಜಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಉದ್ಯಮಿ ಸದಾಶಿವ ಶೆಟ್ಟಿ, ಬಂಟವಾಳ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ ಇರಾಗುತ್ತು, ಜೊತೆ ಕಾರ್ಯದರ್ಶಿ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಬಂಟರ ಸಂಘ ಬಂಟವಾಳ ವಲಯ ಮಹಿಳಾ ಅಧ್ಯಕ್ಷೆ ಆಶಾ ಪಿ.ರೈ, ಕ್ರೀಡೋತ್ಸವ ಸಮಿತಿ ಸಂಚಾಲಕ ಗಂಗಾದರ ರೈ ತುಂಗೆರೆಕೋಡಿ, ಸಜೀಪ ವಲಯ ಕಾರ್ಯದರ್ಶಿ ನಿತಿನ್ ಅರಸ, ಕೋಶಾಧಿಕಾರಿ ಬಾಲಕ್ರಷ್ಣ ಅರಸ , ಸಜೀಪ ವಲಯ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜಾ, ಹಿರಿಯರಾದ ಪ್ರಪುಲ್ಲಾ ವಿಠಲಕೋಡಿ, ಹಾಗೂ ಬಂಟವಾಳ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರು, ಮತ್ತು ಎಲ್ಲಾ ವಲಯ ಅಧ್ಯಕ್ಷ ರು, ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು. ಬಾಲಕ್ರಷ್ಣ ಶೆಟ್ಟಿ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು