ಡಿಸೆಂಬರ್‌ನಲ್ಲಿ ನಡೆಯಲಿರುವ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ರೈತರ ಸಂಪೂರ್ಣ ಸಾಲಮನ್ನಾ, ಮಲೆನಾಡ ಹಾಗೂ ಕರಾವಳಿ ರೈತರ ಸಮಸ್ಯೆ, ಅಡಿಕೆ ಕೊಳೆರೋಗದ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು ಪ್ರಶ್ನಿಸಿ, ಈ ಬಗ್ಗೆ ಸೂಕ್ತ ಪರಿಹಾರ ಒದಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಒತ್ತಾಯಿಸಿದ್ದಾರೆ.
ಬಿ.ಸಿ.ರೋಡ್‌ನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾ, ಪ್ರಾಕೃತಿಕ ವಿಕೋಪದಿಂದ ದ.ಕ.ಜಿಲ್ಲೆ ಹಾಗೂ ಉತ್ತರಕೊಡಗು ಭಾಗದ ಅಡಿಕೆ ಕೊಳೆರೋಗ, ಬೆಳೆಹಾನಿ ಹಾಗೂ ಎಲೆಹಳದಿ ರೋಗದಿಂದ ಕೃಷಿನಷ್ಟ ರೈತರಿಗೆ ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಿ ನ. 19ರಂದು ವಿಧಾನಸೌಧಕ್ಕೆ ಮುತ್ತಿಗೆ ಚಳವಳಿ ನಡೆಸಿ, ಮುಖ್ಯಮಂತ್ರಿ ಅವರಿಗೆ ಒತ್ತಾಯಪತ್ರವನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಲೆನಾಡ ಹಾಗೂ ಕರಾವಳಿ ರೈತರ ಸಮಸ್ಯೆಯ ಬಗ್ಗೆ ವಿಧಾನಮಂಡಲದಲ್ಲಿ ಧ್ವನಿಎತ್ತುವಂತೆ ಎಲ್ಲ ಶಾಸರರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಇಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರನ್ನು ಭೇಟಿ ಮಾಡಿ ಮನವಿ ಮೂಲಕ ಒತ್ತಾಯಿಸಿದ್ದು, ಶಾಸಕರು ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, ರೈತಪರ ಹೋರಾಟಕ್ಕೆ ಕೈಜೋಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ರಾಜ್ಯ ರೈತರ 22 ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಅವರಿಗೆ ಸಲ್ಲಿಸುವ ಒತ್ತಾಯಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕೊಡಗಿನಲ್ಲಿ ಅತಿವೃಷ್ಠಿ, ಮಲೆನಾಡು ಮತ್ತು ಕರಾವಳಿ ಅಡಿಕೆಕೊಳೆರೋಗ, ರೈತರ ಬೆಳೆಹಾನಿಯನ್ನು ಪ್ರಾಕೃತಿಕ ವಿಕೋಪದಡಿ ಪರಹಾರವನ್ನು ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರೇಮನಾಥ್, ಉಪಾಧ್ಯಕ್ಷ ಸತೀಶ್ಚಂದ್ರ ರೈ, ಪ್ರಕಾಶ್ ಫರ್ನಾಂಡಿಸ್ ಉಪಸ್ಥಿತರಿದ್ದರು.