ಲೇಖಕಿ ಅನಿತಾ ನರೇಶ್ ಮಂಚಿ ಬರೆದ ಎರಡು ಪುಸ್ತಕಗಳು ಮಂಚಿಯ ಲೇಖಕಿಯ ಮನೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡವು.
ಕಥಾಸಂಕಲನ ‘ನೈಲಾ’ ಮತ್ತು ವಿಜಯವಾಣಿ ಪತ್ರಿಕೆಯ ಅಂಕಣ ಬರಹಗಳ ಸಂಗ್ರಹ ‘ಮಹತಿ’ ಪುಸ್ತಕಗಳನ್ನು ಡಾ. ಸುರೇಖಾ ರವಿಶಂಕರ್ ಮತ್ತು ವೀಣಾ ಅನಂತ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಡಾ. ಸುಲೇಖಾ ಜೀವನದ ದಾರಿ ಚೆಂದವೆಂದು ಮೈಮರೆತು ಕುಳಿತುಕೊಳ್ಳುವಂತಿಲ್ಲ. ಸಾಧಿಸಬೇಕಾದದ್ದು ಇನ್ನಷ್ಟು ಇದೆ ಎಂಬ ಎಚ್ಚರ ಅಗತ್ಯ ಎಂದರು.
ಕಾರ್ಯಕ್ರಮವನ್ನು ಕೊಮ್ಮೆ ತಿಮ್ಮಣ್ಣ ಭಟ್ ಉದ್ಘಾಟಿಸಿದರು. ಮೇಘಾ ಕಾಯರ್ಪಾಡಿ ಪ್ರಾರ್ಥಿಸಿದರು. ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ಟರು ಭಕ್ತ ಸುದಾಮ ಹರಿಕಥೆ ನಡೆಸಿಕೊಟ್ಟರು. ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ ಮದ್ದಳೆಯಲ್ಲಿ ಸಹಕರಿಸಿದರು. ರೇಷ್ಮಾ ನರಸಿಂಹ ಕಜೆ, ಪ್ರಮೀಳಾ ಕೊಳಕೆ, ಮೇಘಾ ಕಾಯರ್ಪಾಡಿ, ಕೃತ್ತಿಕಾ ಮತ್ತು ಪಂಚಮಿ ಲಘು ಸಂಗೀತ, ಕಿಶೋರ್ ಭಟ್ ಕೊಮ್ಮೆ ಅವರಿಂದ ಯಕ್ಷಗಾನ ಹಾಡುಗಳು ಪ್ರಸ್ತುತಗೊಂಡವು. ರಾಜೇಂದ್ರಕೃಷ್ಣ ಪಂಜಿಗದ್ದೆ ಮತ್ತು ಗಣೇಶ ಭಟ್ ಬೆಳಾಲು ಸಹಕರಿಸಿದರು. ಅಭಿಲಾಷಾ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.