ಭಾನುವಾರ ಲೋರೆಟ್ಟೊ ಮಾತಾ ಚರ್ಚ್ ನ ವಾರ್ಷಿಕ ಹಬ್ಬದ ಪ್ರಯುಕ್ತ (ಸಾಂತ್ ಮಾರಿ) ಪರಮ ಪ್ರಸಾದದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಬಜ್ಜೋಡಿ ಫ್ಯಾಮಿಲಿ ಲೈಫ್ ಸರ್ವಿಸ್ ಸೆಂಟರ್ ನಿರ್ದೇಶಕ ವಂ. ಅನಿಲ್ ಡಿಸೋಜಾ ಪ್ರಧಾನ ಧರ್ಮಗುರುಗಳಾಗಿ ನೂರಾರು ಭಕ್ತರೊಂದಿಗೆ ಬಲಿಪೂಜೆ ಅರ್ಪಿಸಿದರು.
ಚರ್ಚ್ ನ ಧರ್ಮಗುರುಗಳಾದ ವಂ. ಎಲಿಯಸ್ ಡಿಸೋಜಾ, ವಂ.ಜೋನ್ ಫೆರ್ನಾಂಡಿಸ್, ಮೀಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂ. ಮೈಕೆಲ್ ಸಂತುಮಾಯೆರ್ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಚರ್ಚ್ ನಿಂದ ಆರಂಭಗೊಂಡ ಪರಮ ಪ್ರಸಾದದ ಮೆರವಣಿಗೆ ಬ್ಯಾಂಡ್ ವಾದ್ಯ,ಪಾಟಾಕಿಗಳ ಸಡಗರದೊಂದಿಗೆ ಲೋರೆಟ್ಟೊ ಅಂಚೆ ಕಚೇರಿಯಿಂದ ಲೋರೆಟ್ಟೊ ಪದವ್ ಮೂಲಕ ಚರ್ಚ್ ಗೆ ಬಂದು ಕೊನೆಗೊಂಡಿತು.
ಇದೇ ಸಂದರ್ಭ ಚರ್ಚ್ ವ್ಯಾಪ್ತಿಯ ಎಲ್ಲಾ ಕ್ರೈಸ್ತ ಕುಟುಂಬಗಳಿಗೆ ಗೌರವ ಪೂರ್ವಕವಾಗಿ ಮೇಣದ ಬತ್ತಿ ಯನ್ನು ವಿತರಿಸಲಾಯಿತು. ವಿಶ್ವ ಕಥೊಲಿಕ್ ಧರ್ಮ ಗುರುಗಳಾದ ಪೋಪ್ ಫ್ರಾನ್ಸಿಸ್ ಸೂಚನೆಯ ಮೇರೆಗೆ ಲಾವ್ದತೊ ಸಿ ಸಂಡೇ ಆಚರಣೆ ಮಾಡಲು ಉದ್ದೇಶಿಸಿರುವ ಹಿನ್ನಲೆಯಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ಚರ್ಚ್ ಗಳಲ್ಲಿ ನ. 25 ರಂದು ಸಾಗುವಾನಿ ಸಸಿ ನೆಡುವ ಕಾರ್ಯಕ್ರಮಕ್ಕೆ ಪೂರಕವಾಗಿ ಪ್ರದಾನ ಧರ್ಮಗುರುಗಳು ಈ ಕಾರ್ಯಕ್ರಮವನ್ನು ಚರ್ಚ್ ನಲ್ಲಿ ನೆರವೇರಿಸಿದರು.
ಡಿಸೆಂಬರ್ 2ರಂದು ಲೋರೆಟ್ಟೊ ಮಾತೆಯ ವಾರ್ಷಿಕ ಹಬ್ಬವನ್ನು ಆಚರಿಸಲಾಗುವುದು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…