ಬಂಟ್ವಾಳ

“ಸತ್ಯ-ಧರ್ಮ” ಜೋಡುಕರೆ ಬಯಲು ಕಂಬಳ ಕೂಟ ಫಲಿತಾoಶ

pic: Veekshith K Nisarg

6’ನೇ ಕಕ್ಯಪದವು “ಸತ್ಯ-ಧರ್ಮ” ಜೋಡುಕರೆ ಬಯಲು ಕಂಬಳ ಕೂಟ ಫಲಿತಾoಶ.

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 03 ಜೊತೆ
ಅಡ್ಡಹಲಗೆ: 02 ಜೊತೆ
ಹಗ್ಗ ಹಿರಿಯ: 14 ಜೊತೆ
ನೇಗಿಲು ಹಿರಿಯ: 14 ಜೊತೆ
ಹಗ್ಗ ಕಿರಿಯ: 14 ಜೊತೆ
ನೇಗಿಲು ಕಿರಿಯ: 44 ಜೊತೆ
ಒಟ್ಟು ಕೋಣಗಳ ಸಂಖ್ಯೆ : 91 ಜೊತೆ
————————–

ಕನೆಹಲಗೆ:

ವಾಮಂಜೂರು ತಿರುವೈಲು ಗುತ್ತು ಅಭಯ ನವೀನ್’ಚಂದ್ರ ಆಳ್ವ
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

————————–

ಹಗ್ಗ ಹಿರಿಯ:

ಪ್ರಥಮ: ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿ’ಸೋಜ ‘ಎ’
ಓಡಿಸಿದವರು: ಮಾಳ ಕಲ್ಲೇರಿ ಭರತ್ ಶೆಟ್ಟಿ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ. ಶೆಟ್ಟಿ ‘ಬಿ’
ಓಡಿಸಿದವರು: ಮರೋಡಿ ಶ್ರೀಧರ್

————————–

ಹಗ್ಗ ಕಿರಿಯ:

ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ
ಓಡಿಸಿದವರು: ಮಾರ್ನಾಡ್ ರಾಜೇಶ್

ದ್ವಿತೀಯ: ಕಾಂತಾವರ ಅಂಬೋಡಿಮಾರ್ ರಘುನಾಥ ದೇವಾಡಿಗ
ಓಡಿಸಿದವರು: ನಕ್ರೆ ಮಂಜುನಾಥ ಭಂಡಾರಿ

————————–

ನೇಗಿಲು ಹಿರಿಯ:

ಪ್ರಥಮ: ಇರುವೈಲು ಪಾಣಿಲ ಬಾಡ ಪೂಜಾರಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಬೋಳದ ಗುತ್ತು ಸತೀಶ್ ಶೆಟ್ಟಿ ‘ಎ’
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ

————————–

ನೇಗಿಲು ಕಿರಿಯ:

ಪ್ರಥಮ: ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ
ಓಡಿಸಿದವರು: ಮರೋಡಿ ಶ್ರೀಧರ್

ದ್ವಿತೀಯ: ಮುಂಡ್ಕೂರು ಪುನ್ಕೆದಡಿ ಲೊಕೇಶ್ ಪೂಜಾರಿ
ಓಡಿಸಿದವರು: ಕಡಂದಲೆ ದುರ್ಗಪ್ರಸಾದ್

————————–

ಅಡ್ಡಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ. ಪೂಜಾರಿ
ಹಲಗೆ ಮೆಟ್ಟಿದವರು: ಶಿರೂರು ಮಂದಾರ್ತಿ ಮುದ್ದುಮನೆ ಗೋಪಾಲ ನಾಯ್ಕ್

ದ್ವಿತೀಯ: ಹಂಕರಜಾಲು ಜಯರಾಜ್ ಭಿರ್ಮಣ್ಣ ಶೆಟ್ಟಿ
ಹಲಗೆ ಮೆಟ್ಟಿದವರು: ನಾರಾವಿ ಯುವರಾಜ ಜೈನ್

ಉದ್ಘಾಟನೆ:

ಶ್ರೀ ಕ್ಷೇತ್ರ ಕಕ್ಯಬೀಡು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ನಾಯಕ್ ಉಳಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಬಳ ಈ ಮಣ್ಣಿನ ಶಕ್ತಿಯ, ಮಣ್ಣಿನ ಗುಣದ ಆರಾಧನಾ ಪದ್ಧತಿಯಾಗಿದೆ ಎಂದು ಹೇಳಿದರು.

ಪ್ರಗತಿಪರ ಕೃಷಿಕ ಕಜೆಕಾರು ಕೆ.ಸುಂದರ ಪೂಜಾರಿ ಕೊಲೆಂಜಿಕೋಡಿ ಅವರು ಕಂಬಳ ಕರೆಯನ್ನು ಉದ್ಘಾಟಿಸಿದರು.
ಬಳಿಕ ಕೋಟಿ-ಚೆನ್ನಯ ಸಭಾ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಹಿರಿಯ ಕಂಬಳ ಓಟಗಾರ ಜಯಶೆಟ್ಟಿ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ವೇ| ಮೂ| ರಾಘವೇಂದ್ರ ಭಟ್ ಕೊಡಂಬೆಟ್ಟು, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಹರೀಶ್ಚಂದ್ರ ಪೂಜಾರಿ, ಪ್ರಗತಿಪರ ಕೃಷಿಕ ಬಾಬು ಗೌಡ ಪೆಂರ್ಗಾಲು , ಸ್ಥಳದಾನಿ ತುಕ್ರಪ್ಪ ಗೌಡ, ಉಳಿ ಗ್ರಾ. ಪಂ. ಸದಸ್ಯ ಚಿದಾನಂದ ರೈ, ಪ್ರಗತಿಪರ ಕೃಷಿಕ ಸುಧಾಕರ ಶೆಟ್ಟಿ ಶಂಕರಬೆಟ್ಟು , ಜಯ ಪೂಜಾರಿ ಕುಕ್ಕಾಜೆ, ಪ್ರವೀಣ್ ಶೆಟ್ಟಿ ಕಿಂಜಾಲು, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಉಮೇಶ್ ಪೂಜಾರಿ, ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಗೆಳೆಯರ ಬಳಗದ ಪದಾಽಕಾರಿಗಳಾದ ಪುರುಷೋತ್ತಮ ಪಲ್ಕೆ, ಸುರೇಶ್ ಮೈರ, ಮಹಾಕಾಳಿ ಮಹಿಳಾ ಮಂಡಲ ಅಧ್ಯಕ್ಷೆ ಚಂದ್ರಕಲಾ ಯತೀಂದ್ರ ಚೌಟ, ಮತ್ತಿತರರು ಉಪಸ್ಥಿತರಿದ್ದರು.

ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಶಿವಾನಂದ ಮೈರ ಸ್ವಾಗತಿಸಿದರು. ಮಾಜಿ ಅಧ್ಯಕ್ಷ, ನ್ಯಾಯವಾದಿ ರಂಜಿತ್ ಮೈರ ವಂದಿಸಿದರು. ಪ್ರಶಾಂತ ಮೈರ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ಮೈರ ಶ್ರೀ ಮಹಾಕಾಳಿ ಅಮ್ಮನವರ ಸನ್ನಿಽಯಲ್ಲಿ ಸಹ ಪರಿವಾರ ದೈವಗಳಿಗೆ ವಿಶೇಷ ಪೂಜೆ ನಡೆದ ಬಳಿಕ ಓಟದ ಕೋಣಗಳನ್ನು ಕಂಬಳಗದ್ದೆಗೆ ಅದ್ದೂರಿಯ ಮೆರವಣಿಗೆಯಲ್ಲಿ ತರಲಾಯಿತು.

ಪ್ರಧಾನ ತೀರ್ಪುಗಾರರಾದ ಎಂ.ರಾಜೀವ ಶೆಟ್ಟಿ ಎಡ್ತೂರು, ನಿರಂಜನ್ ರೈ ಕೋಡ್ಯಾಡಿ, ಉದ್ಘೋಷಕರಾದ ಸತೀಶ್ ಹೊಸ್ಮಾರು, ಮಹಾವೀರ ಜೈನ್, ಪ್ರಕಾಶ್ ಕರ್ಲ, ಕಂಬಳ ಕರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಲೇರಿಯನ್ ಡೇಸಾ, ಸುದೇಶ್ ಕುಮಾರ್, ಸಂಕಪ್ಪ ಶೆಟ್ಟಿ, ಶ್ರೀಧರ್ ಆಚಾರ್ಯ ಮತ್ತಿತರರು ಕಂಬಳ ನಿರ್ವಹಣೆಯ ವಿವಿಧ ವಿಭಾಗಗಳಲ್ಲಿ ಸಹಕರಿಸಿದ್ದರು. ಕಂದಾಯ, ಪೊಲೀಸ್, ಪಶು ವೈದ್ಯಕೀಯ ಇಲಾಖೆ ಪರಿಶೀಲನೆ ನಡೆಸಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts