ಮಂಗಳೂರಿನ ನಂತೂರು ಸರ್ಕಲ್ ಸಮೀಪ ಬುಧವಾರ ಬೆಳಗ್ಗಿನ ವೇಳೆ ಅನಿಲ ತುಂಬಿದ ಟ್ಯಾಂಕರ್ ಒಂದು ಉರುಳಿಬಿದ್ದ ಪರಿಣಾಮ ಕುಲಶೇಖರದಿಂದ ಮಂಗಳೂರಿಗೆ ತೆರಳುವ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮಂಗಳೂರು ಪೊಲೀಸರು, ಅಗ್ನಿಶಾಮಕದಳ ಸಹಾಯದಿಂದ ಟ್ಯಾಂಕರನ್ನು ಮೇಲಕ್ಕೆತ್ತಿದ ಬಳಿಕ ವಾಹನ ಸಂಚಾರ ಮೊದಲಿನಂತಾಯಿತು. ಯಾವುದೇ ಗ್ಯಾಸ್ ಸೋರಿಕೆ ಆಗದ ಕಾರಣ ದೊಡ್ಡ ಮಟ್ಟದ ಅಪಾಯ ತಪ್ಪಿದೆ.
ಟ್ಯಾಂಕರ್ ಅನ್ನು ಮೇಲಕ್ಕೆತ್ತಲು ಪ್ರಯತ್ನ ನಡೆದಿದ್ದು, ಗ್ಯಾಸ್ ಲೀಕೇಜ್ ಆಗದಂತೆ ಮೇಲಕ್ಕೆತ್ತಿದ ಬಳಿಕ ಸಂಚಾರ ಸುಗಮವಾಯಿತು. ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ.
ಏನಾಗಿತ್ತು:
ನಂತೂರಿನಿಂದ ಕುಲಶೇಖರ ತೆರಳುವ ದಾರಿಯ ಎರಡೂ ಬದಿಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಯಿತು. ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಪಡೀಲ್ ನಿಂದ ನಂತೂರು ಕಡೆ ಬಂದು ಮಂಗಳೂರಿಗೆ ತೆರಳುವವರು ಪಂಪ್ ವೆಲ್ ಮಾರ್ಗವನ್ನು ಕುಲಶೇಖರದಿಂದ ಮಂಗಳೂರಿಗೆ ತೆರಳುವವರೂ ಪಂಪ್ ವೆಲ್ ಮೂಲಕವೇ ಹೋಗಲು ಸೂಚಿಸಿದರು. ಟ್ಯಾಂಕರ್ ಮೇಲಕ್ಕೆತ್ತಿದ ಬಳಿಕ ರಸ್ತೆ ಸಂಚಾರ ಸುಗಮವಾಗಿ ಸಾಗಿತು.