ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಂತೆ 18 ವರ್ಷ ವರೆಗಿನ ಮಕ್ಕಳ ಬದುಕುವ, ರಕ್ಷಣೆ, ವಿಕಾಸ ಹೊಂದುವ , ಭಾಗವಹಿಸುವ ಮೂಲಭೂತ ಹಕ್ಕು ಗಳನ್ನು ಖಾತ್ರಿ ಪಡಿಸುವಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ರಾದ ಉಮೇಶ್ ನಿರ್ಮಲ್ ಹೇಳಿದರು.
ರೋಟರಿ ಸಭಾಂಗಣ ಬಿ.ಸಿ.ರೋಡಿನಲ್ಲಿ ನಡೆದ ಅಂತರಾಷ್ಟೀಯ ಮಕ್ಕಳ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದರು. ರೋಟರಿ ಜಿಲ್ಲಾ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಆಯ್ದ ಅಂಗನವಾಡಿಗಳಿಗೆ ನೆರವು ನೀಡುವ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಮೂಡಬಿದರೆಯಲ್ಲಿ ನಡೆದ ರೋಟರಿ ವಲಯ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಗೌರವಿಸಲಾಯಿತು. ಸಮಾರಂಭದಲ್ಲಿ ಕಾರ್ಯದರ್ಶಿ ಜಯರಾಜ್ ಬಂಗೇರ, ಪದಾಧಿಕಾರಿಗಳಾದ ಮಹಮ್ಮದ್ ಮುನೀರ್, ಪದ್ಮ ನಾಭ ರೈ, ಮಹಮ್ಮದ್ ಹನೀಪ್, ಶಾಂತ್ ರಾಜ್, ಮಂಜುಳಾ ಶಾಂತ್ ರಾಜ್, ವಿಂದ್ಯಾ ರೈ, ಉಪಸ್ತಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…