ಬಂಟ್ವಾಳ

ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಅತ್ಯಾಧುನಿಕ ಯಂತ್ರೋಪಕರಣ

ಬಂಟ್ವಾಳದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ಸಾರ್ವಜನಿಕರಿಗೆ ದೊರಕುವುದಕ್ಕಾಗಿ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ಬಂಟ್ವಾಳ  ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಮನವಿಯ ಮೇರೆಗೆ ಮಂಗಳೂರು ಎ.ಜೆ ಆಸ್ಪತ್ರೆ ವತಿಯಿಂದ ನೀಡಲ್ಪಟ್ಟ ಸುಮಾರು  ಐವತ್ತು ಲಕ್ಷ ರೂಪಾಯಿಯ ಉಪಕರಣಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಶಾಸಕರೊಂದಿಗೆ ದಾನಿಗಳಾದ ಎ.ಜೆ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ ಪ್ರಶಾಂತ್ ಮಾರ್ಲ ಉಪಸ್ಥಿತರಿದ್ದರು.

ಬಂಟ್ವಾಳ ಆಸ್ಪತ್ರೆಯ ಲ್ಯಾಬ್ ಅನ್ನು ಆಧುನೀಕರಿಸಿ, ರೋಗಿಗಳಿಗೆ ಅನುಕೂಲಕರವಾಗುವ ಅತ್ಯಾಧುನಿಕ ಯಂತ್ರಗಳು, ಶಸ್ತ್ರಚಿಕಿತ್ಸೆ ಸಂದರ್ಭ ರಕ್ತಸ್ರಾವ ನಿಯಂತ್ರಿಸುವ ಯಂತ್ರ, ರೋಗಿಗಳ ಸಹಿತ ಆಸ್ಪತ್ರೆಗೆ ಸಂಬಂಧಿಸಿದ ಬಟ್ಟೆಗಳನ್ನು ಒಣಗಿಸುವ ಯಂತ್ರವನ್ನು ಮಂಗಳೂರಿನ ಎ.ಜೆ.ಆಸ್ಪತ್ರೆ ನೆರವಿನಿಂದ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, ಇನ್ನು ಐದಾರು ತಿಂಗಳೊಳಗೆ ಆಸ್ಪತ್ರೆಗೆ ಎಸ್.ಟಿ.ಪಿ. ಯನ್ನು ಒದಗಿಸಲಾಗುತ್ತದೆ. ಇದರಿಂದ ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ನಡೆಯುತ್ತದೆ. ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ಮಕ್ಕಳ ತಜ್ಞರು ಮತ್ತು ಅರಿವಳಿಕೆ ತಜ್ಞರ ಕೊರತೆಯನ್ನು ನೀಗಿಸಲು ಆರೋಗ್ಯ ಸಚಿವರೊಂದಿಗೆ ಮಾತನಾಡುವುದಾಗಿ ಹೇಳಿದರು. ಆಸ್ಪತ್ರೆಯಲ್ಲಿ ಶೀಘ್ರ ಡಯಾಲಿಸಿಸ್ ಗೂ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಇಡೀ ಬಿ.ಸಿ.ರೋಡ್ ಸೌಂದರ್ಯವನ್ನು ವೃದ್ಧಿಸುವ ಸಲುವಾಗಿ ಬಿ.ಸಿ.ರೋಡ್ ಫ್ಲೈಓವರ್ ಅಡಿ ಸಹಿತ ನಾನಾ ಪ್ರದೇಶಗಳನ್ನು ಸಾರ್ವಜನಿಕ ಸ್ನೇಹಿ ಪ್ರದೇಶವಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ಸಾರ್ವಜನಿಕರನ್ನು ಯಾವುದೇ ಜಾತಿ, ಮತ, ಪಕ್ಷ ಎಂಬ ತಾರತಮ್ಯ ಇಲ್ಲದೆ ಸೇರಿಸಿಕೊಂಡು ಸಮಿತಿ ರಚಿಸಲಾಗುವುದು. ಮುಂದಿನ ವಾರದಲ್ಲಿ ಇದರ ಸಂಪೂರ್ಣ ನೀಲನಕಾಶೆಯನ್ನು ಸಾರ್ವಜನಿಕರ ಮುಂದೆ ಇಡಲಾಗುತ್ತದೆ. ಬಿ.ಸಿ.ರೋಡಿನ ಪ್ರಮುಖ ಸಮಸ್ಯೆಗಳು ಇದರಿಂದ ಬಗೆಹರಿಯಲಿವೆ ಎಂಬ ವಿಶ್ವಾಸವನ್ನು ರಾಜೇಶ್ ನಾಯ್ಕ್ ವ್ಯಕ್ತಪಡಿಸಿದರು. ಈ ಸಂದರ್ಭ ಎ.ಜೆ. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸದಾಶಿವ ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts