ಬಂಟ್ವಾಳ ತಾಲೂಕಿನ ಸ್ವಚ್ಚತೆಯನ್ನು ಅದ್ಯತೆಯ ನೆಲೆಯಲ್ಲಿ ಪರಿಗಣಿಸಬೇಕು, ಈ ನಿಟ್ಟಿನಲ್ಲಿ ಪ್ರಮುಖವಾಗಿ ಬಿ.ಸಿ.ರೋಡಿನಂತ ನಗರಪ್ರದೇಶದಲ್ಲಿ ಶೌಚಾಲಯ ನಿರ್ಮಾಣಕ್ಕೆ ತಕ್ಷಣ ಜಾಗ ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೂಚಿಸಿದ್ದಾರೆ.
ಸೋಮವಾರ ಬಂಟ್ವಾಳದಲ್ಲಿ ತಾಪಂ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವ ಶೌಚಾಲಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ತಾಪಂ ಸ್ತಾಯಿಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ಅವರು ಬಿ.ಸಿ.ರೋಡಿಗೆ ದಿನನಿತ್ಯ ತಮ್ಮ ಅಗತ್ಯದ ಕೆಲಸಕ್ಕಾಗಿ ಸಾವಿರಾರು ಮಂದಿ ನಾಗರಿಕರು ಬರುತ್ತಾರೆ.ಆದರೆ ಇಲ್ಲಿ ಅಗತ್ಯವಾದಸಾರ್ವಜನಿಕ ಶೌಚಾಲಯವಿಲ್ಲದಿರುವುದು ಮಾತ್ರ ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಪಂಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ಮಂಜುಳಾ ಮಾವೆ, ಎಂ.ಎಸ್.ಮಹಮ್ಮದ್, ರವೀಂದ್ರ ಕಂಬಳಿ ಪದ್ಮಶೇಖರಜೈನ್, ಕಮಾಲಾಕ್ಷಿ ಪೂಜಾರಿ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್. ಎನ್ ತಾಪಂ ಸದಸ್ಯರು ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಪಿಡಿಒ ಶಿವಾನಂದ್ ಸ್ವಚ್ಚತಾ ಪ್ರತಿಜ್ಙೆ ಬೋಧಿಸಿದರು.ವಿಜಯಶಂಕರ ಆಳ್ವ ವಂದಿಸಿದರು.ಕಲಾವಿದ ಮಂಜುವಿಟ್ಲ ನಿರೂಪಿಸಿದರು.