ಕವರ್ ಸ್ಟೋರಿ

ದೊಡ್ಡ ಕಟ್ಟಡಗಳ ಊರಲ್ಲಿ ಟಾಯ್ಲೆಟ್ ನಿರ್ಮಾಣಕ್ಕೆ ಜಾಗವೇ ಸಿಕ್ಕಿಲ್ಲ!!!

ಬಂಟ್ವಾಳನ್ಯೂಸ್ –  ಸಂಪಾದಕ: ಹರೀಶ ಮಾಂಬಾಡಿ

ಬಿ.ಸಿ.ರೋಡ್ ಗೆ ಬಂದಾಗ ಶೌಚಾಲಯಕ್ಕೆ ಹೋಗಬೇಕು ಅನ್ನಿಸಿದರೆ ಎಲ್ಲಿಗೆ ಹೋಗುತ್ತೀರಿ? ಸದ್ಯಕ್ಕೆ ಪುರುಷರು ಉಪಯೋಗಿಸುವುದು ಸಬ್ ರಿಜಿಸ್ಟ್ರಾರ್ ಕಾರ್ಯಾಚರಿಸುತ್ತಿದ್ದ ಹಳೇ ಕಟ್ಟಡ. ಅದನ್ನು ಹೊರತುಪಡಿಸಿದರೆ ಸರಕಾರಿ ಇಲಾಖೆಯ ಕಚೇರಿಗಳ ಟಾಯ್ಲೆಟ್ ಗಳು. ಸ್ವಲ್ಪ ನಡೆಯಲು ಸಾಧ್ಯವಿದೆ ಎಂದಾದರೆ ಬಸ್ ನಿಲ್ದಾಣ ಎಂಬ ವಾಣಿಜ್ಯ ಸಂಕೀರ್ಣದಲ್ಲಿರುವ ಸುಲಭ ಶೌಚಾಲಯ.

ಇಂದು ವಿಶ್ವ ಶೌಚಾಲಯ ದಿನಾಚರಣೆ. ಬಿ.ಸಿ.ರೋಡಿನ ಖಾಸಗಿ ಜಾಗವೊಂದರಲ್ಲಿ ಸರಕಾರಿ ಕಾರ್ಯಕ್ರಮವೊಂದು ಬಹಳಷ್ಟು ಆಶಯ, ಯೋಚನೆಗಳು ಹಾಗೂ ಶೌಚಾಲಯ ಎಷ್ಟು ಅಗತ್ಯ ಎಂದು ಸಾರಿ ಹೇಳಲು ನಡೆಯಿತು. ಈ ಸಂದರ್ಭ, ಬಿ.ಸಿ.ರೋಡಿನಲ್ಲಿ ಶೌಚಾಲಯವೆಲ್ಲಾದರೂ ಇದೆಯೇ ಎಂದು ನೋಡಹೊರಟರೆ, ಪ್ರಮುಖವಾದ ಜಾಗಗಳಲ್ಲಿ ಯಾವುದೂ ಕಾಣಸಿಗಲಿಲ್ಲ. ತಾಲೂಕು ಕೇಂದ್ರಕ್ಕೆ ನಾನಾ ಕಾರ್ಯಗಳಿಗೆಂದು ಆಗಮಿಸುವವರಅರ್ಜೆಂಟ್ ಕರೆಗೆ ಉಪಯೋಗವಾಗುವ ಶೌಚಾಲಯಗಳ ಕೊರತೆ ಇದೆ. ಯುವಕರು ಎಲ್ಲಾದರೂ ದಾರಿ ಹುಡುಕುತ್ತಾರೆ. ಆದರೆ ಮಹಿಳೆಯರು, ವೃದ್ಧರಿಗೆ ನಿತ್ಯ ಸಮಸ್ಯೆ. ಸದ್ಯಕ್ಕೆ ಬಿ.ಸಿ.ರೋಡ್ನಲ್ಲಿರುವ ಭವ್ಯ ಮಿನಿ ವಿಧಾನಸೌಧದ ಟಾಯ್ಲೆಟ್ ಇಲ್ಲಿಗೆ ಆಗಮಿಸುವವರಿಗೆ ಸಾರ್ವಜನಿಕ ಶೌಚಾಲಯದಂತಾಗಿದೆ. ಸ್ಥಳೀಯ ಸರಕಾರಿ ಕಚೇರಿಗಳಿಗೂಒಮ್ಮೆ ಟಾಯ್ಲೆಟ್ ಗೆ ಹೋಗಬಹುದಾ ಎಂದು ಕೇಳಿ ಹೋಗುವವರೂ ಇದ್ದಾರೆ. ತಪ್ಪಿದರೆ, ಯಾವುದಾದರೂ ಖಾಸಗಿ ಕಟ್ಟಡದ ಶೌಚಾಲಯಕ್ಕೆ ನುಗ್ಗಬೇಕು.

ಇದ್ದ ಶೌಚಾಲಯದ ಒಂದು ಕಲ್ಲೂ ಬಿಡದೆ ಕೆಡಹಲಾಗಿದೆ. ಬದಲಿಗೆ ಎಲ್ಲೂ ಜಾಗ ಸಿಕ್ಕಿಲ್ಲವೆಂಬುದೇ ಸೋಜಿಗ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ