ನಂದನಹಿತ್ಲು ಶ್ರೀವೈದ್ಯನಾಥ ಅರಸು ಧೂಮಾವತಿ ಬಂಟ ದೈವಸ್ಥಾನದ ಶ್ರೀ ವೈದ್ಯನಾಥ ದೈವಕ್ಕೆ ಪಾಪೆಬಂಡಿ ನಿರ್ಮಾಣದ ವಿಜ್ಙಾಪನಾ ಪತ್ರ ಬಿಡುಗಡೆಯು ದೈವಸ್ಥಾನದ ಅವರಣದಲ್ಲಿ ನಡೆಯಿತು. ದೈವಸ್ಥಾನದ ಬಾಳಿಗಾ ಮನೆತನದ ಸುಧೀರ್ ಬಾಳಿಗಾ ಬಂಟ್ವಾಳ ಅವರು ವಿಜ್ಙಾಪನಾಪತ್ರವನ್ನು ಬಿಡುಗಡೆಗೊಳಿಸಿ ದೈವದ ಸಂಕಲ್ಪದಂತೆ ಈ ಪಾಪೆಬಂಡಿ ನಿರ್ಮಿಸಲಾಗುತ್ತಿದ್ದು, ಮುಂದಿನ ವಾರ್ಷಿಕ ನೇಮೋತ್ಸವದ ಸಂದರ್ಭ ದೈವಕ್ಕೆ ಸಮರ್ಪಣೆಗೆ ನಿಶ್ಚಯಿಸಿರುವುದರಿಂದ ಭಗವದ್ಬಕ್ತರ ಸಹಕಾರವನ್ನು ಯಾಚಿಸಿದರು.
ಸಮಿತಿಯ ಅಧ್ಯಕ್ಷ ಗಣೇಶ್‌ಸುವರ್ಣ ಅವರು ಪಾಪೆಬಂಡಿ ಕುರಿತು ಮಾಹಿತಿ ನೀಡಿದರು. ಗೌರವಾಧ್ಯಕ್ಷ ಸೇಸಪ್ಪಕೋಟ್ಯಾನ್ ಪಚ್ಚಿನಡ್ಕ, ಉದ್ಯಮಿ ಶ್ರೀಧರ ಕೋಟ್ಯಾನ್ ಬಿಜಾಪುರ, ಕೋಶಾಧಿಕಾರಿ ಲೋಕೇಶ್ ಬಂಗೇರ ಮಾಣಿ, ವಿಶ್ವನಾಥ ಪೂಜಾರಿ ಪೊನ್ನಂಗಿಲಗುತ್ತು, ಸಂಜೀವ ಪೂಜಾರಿ ಗಾಣದಪಡ್ಪು, ಲೋಕನಾಥ ಪೂಜಾರಿ ಬಡೆಕೊಟ್ಟು, ಶಿಲ್ಪಿ ಸದಾಶಿವ ಶೆಣೈ, ಹಿಂದು ಯುವಸೇನೆ ಬಂಟ್ವಾಳ ಘಟಕದ ಅಧ್ಯಕ್ಷ ಪುಪ್ಪರಾಜ್ ಬಂಟ್ವಾಳ ಮೊದಲಾದವರಿದ್ದರು. ಸಮಿತಿಯ ಕಾರ್ಯದರ್ಶಿ ಪ್ರಕಾಶ್ ಅಂಚನ್ ಸ್ವಾಗತಿಸಿ, ಪ್ರಸ್ತಾವಿನೆಗೈದು ಸುಮಾರು ೨೧ ಲಕ್ಷ ರೂ.ವೆಚ್ಚದಲ್ಲಿ ಈ ಪಾಪೆಬಂಡಿ ನಿರ್ಮಿಸಲು ಉದ್ದೇಶಿಸಲಾಗಿದೆ. ದೈವದ ಅಪ್ಪಣೆಯಂತೆ ಪೇಟೆ ಸವಾರಿಗೆ ವಿಶೇಷವಾದ ಪಾಪೆಬಂಡಿಯನ್ನು ನಿರ್ಮಿಸಲಾಗುತ್ತಿದೆ.ಕಳೆದ ಬ್ರಹ್ಮಕಲಶದ ವೇಳೆ ಭಗವದ್ಬಕ್ತರು ನೀಡಿದ ಸಹಕಾರದಂತೆ ಈ ವಿಚಾರದಲ್ಲೂ ಸಹಕರಿಸುವಂತೆ ಮನವಿಮಾಡಿದರು.