ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ತೊಕ್ಕೊಟ್ಟು ಶಾಖೆಯ ಸ್ಥಾಪಕ ದಿನದ ಅಂಗವಾಗಿ ಗ್ರಾಹಕ ಸಂಪರ್ಕ ಸಭೆ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಮಾತನಾಡಿ ಸಂಸ್ಥೆಯು 2018 ಸೆಪ್ಟೆಂಬರ್ ತಿಂಗಳಿಗೆ ರೂ. 175 ಕೋ ರೂ. ಠೇವಣಿ ಮತ್ತು ಸಾಲ ಮತ್ತು ಮುಂಗಡ ರೂ. 141 ಕೋಟಿ ಇದ್ದು ಒಟ್ಟು ವ್ಯವಹಾರ 316 ಕೋಟಿ ಇರುತ್ತದೆ ಎಂದರು. ಸಂಸ್ಥೆಗೆ ಈಗ 24 ವರ್ಷದಲ್ಲಿದ್ದು ಮುಂದಿನ ವರ್ಷ ಬೆಳ್ಳಿಹಬ್ಬದ ವರ್ಷದಾಗಿರುತ್ತದೆ. ಸಭೆಯು 2017-18ರಲ್ಲಿ 4.71 ಕೋಟಿ ನಿವ್ವಳ ಲಾಭಗಳಿಸಿ ಸದಸ್ಯರ ಪಾಲು ಬಂಡವಾಳಕ್ಕೆ ಶೇ.23 ಡಿವಿಡೆಂಟ್ ನೀಡಿದೆ. ಕೇಂದ್ರ ಕಛೇರಿಗೆ ಸ್ವಂತ ನಿವೇಶನ ಪಡೆದಿದ್ದು ಪ್ರಸ್ತುತ 20 ಶಾಖೆಗಳನ್ನು ಹೊಂದಿದೆ. ಇನ್ನು 3 ಶಾಖೆಗಳನ್ನು ಪ್ರಾರಂಭಿಸಲಾಗುವುದು. ಅಗ್ರಗಣ್ಯ ಕೋ-ಓಪರೇಟಿವ್ ಸೊಸೈಟಿಗಳಲ್ಲೊಂದಾಗಿದ್ದು 3 ಸಲ ಈ ಕರ್ನಾಟಕ ಸರಕಾರದಿಂದ ಮತ್ತು 7 ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್ ನಿಂದ ಪುರಸ್ಕೃತಗೊಂಡಿದೆ ಎಂದು ಸೊಸೈಟಿ ಕುರಿತು ಮಾಹಿತಿ ನೀಡಿದರು.
ತೊಕ್ಕೊಟ್ಟು ಶಾಖೆಯು ಎರಡು ವರ್ಷಗಳಲ್ಲಿ 81 ಲಕ್ಷ ಠೇವಣಾತಿಗಳು ಮತ್ತು 3.10 ಕೋಟಿ ಸಾಲ ಮತ್ತು ಮುಂಗಡವಿದ್ದು ಲಾಭದಾಯಕವಾಗಿ ನಡೆಯಲಿ. ಸಾಲಗಾರರು ಸಾಲಗಳನ್ನು ಕ್ಲಪ್ತ ಸಮಯದಲ್ಲಿ ಮರು ಪಾವತಿಸುತ್ತಿದ್ದು ಗ್ರಾಹಕರು ನಮ್ಮ ಮೇಲಿಟ್ಟಿರುವ ವಿಶ್ವಾಸವೇ ಮುಖ್ಯ ಕಾರಣ.
ಶಾಖೆಯ ಉಸ್ತವಾರಿ ನಿರ್ದೇಶಕ ಎಚ್.ಆರ್. ಶೆಟ್ಟಿ ಸೊಸೈಟಿಯ ಆರ್ಥಿಕ ಬಲವರ್ಧನೆಯ ಬಗ್ಗೆ ವಿವರಿಸಿದರು. ಸಭೆಯಲ್ಲಿ ಉತ್ತಮ 5 ಗ್ರಾಹಕರನ್ನು ಗೌರವಿಸಲಾಯಿತು. ಶಾಖಾ ವ್ಯವಸ್ಥಾಪಕ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಮಾಧವಿ ಪ್ರಾರ್ಥಿಸಿದರು. ಮೋಹನ್ ದಾಸ್ ರೈ ಪಿಲಾರು ನಿರೂಪಿಸಿದರು. ಪ್ರಭಾರ ಮಹಾ ಪ್ರಬಂಧಕ ಗಣೇಶ್ ಜಿ.ಕೆ ವಂದಿಸಿದರು.