ಬಂಟ್ವಾಳ ರೋಟರಿ ಕ್ಲಬ್‌ನ ವತಿಯಿಂದ ನಿರ್ಮಾಣಗೊಂಡ ವಿವಿಧ ಯೋಜನೆಗಳ ಸರಣಿ ಉದ್ಘಾಟನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಆಶಾಸ್ಪೂರ್ತಿ ಯೋಜನೆಯಡಿ ಕೂರಿಯಳ ಗ್ರಾಮದ ಬ್ಯಾರಿಕೋಡಿ- ಮೂವ ಅಂಗನವಾಡಿ ಕೇಂದ್ರ, ಸಜೀಪಪಡು ಗ್ರಾಮದ ಕೋಟೆಕಣಿ ಅಂಗನವಾಡಿ ಕೇಂದ್ರ ಹಾಗೂ ಬಿ. ಮೂಡ ಗ್ರಾಮದ ನಂದರಬೆಟ್ಟು ಅಂಗನವಾಡಿ ಕೇಂದ್ರದ ಪುನರ್ ನವೀಕರಣ, ಬಿ. ಮೂಡ ಗ್ರಾಮದ ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ನವೀಕರಣ ಹಾಗೂ ಬೆಂಜನಪದವಿನ ಸರಕಾರಿ ಪ್ರೌಢಶಾಲೆಗೆ ಕೈ ತೊಳೆಯುವ ನೀರಿನ ಘಟಕವನ್ನು ನಿರ್ಮಿಸಲಾಗಿದು ರೋಟರಿ ಜಿಲ್ಲಾ ಗವರ್ನರ್ ರೋಹಿನಾಥ್ ಪಿ ಉದ್ಘಾಟಿಸಿದರು.
ಈ ಸಂದರ್ಭ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಕಾರ್ಯದರ್ಶಿ ಶಿವಾನಿ ಬಾಳಿಗ, ಆನ್ಸ್ ಕ್ಲಬ್ ಅಧ್ಯಕ್ಷೆ ವಿದ್ಯಾ ಅಶ್ವನಿ ರೈ, ಮೇಘಾ ಆಚಾರ್ಯ ಪೂರ್ವಾಧ್ಯಕ್ಷ ರಿತೇಶ್ ಬಾಳಿಗ, ವಲಯ ಲೆಪ್ಟಿನೆಂಟ್ ಸಂಜೀವ ಪೂಜಾರಿ, ಸುವರ್ಣ ವರ್ಷಾಚರಣೆ ಸಮಿತಿ ಸಂಚಾಲಕ ಡಾ. ರಮೇಶಾನಂದ ಸೋಮಾಯಾಜಿ, ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಸದಸ್ಯರಾದ ಪ್ರಭಾಕರ ಪ್ರಭು, ಕರುಣಾಕರ ರೈ, ಮಹಮ್ಮದ್ ಇಕ್ಬಾಲ್, ಪ್ರಕಾಶ್ ಬಾಳಿಗ, ಧನಂಜಯ ಬಾಳಿಗ, ರಾಮಣ್ಣ ರೈ, ವಿಶ್ವನಾಥ ಶೆಟ್ಟಿ, ರವಿರಾಜ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ಸಜೀಪಪಡು ಗ್ರಾ.ಪಂ. ಅಧ್ಯಕ್ಷೆ ಉಮಾವತಿ, ಬೆಂಜನಪದವು ಸರಕಾರಿ ಪ್ರೌಢಶಾಲೆಯ ಕಾರ್ಯಧ್ಯಕ್ಷ ವಾಮನ ಆಚಾರ್ಯ, ಪ್ರಾಂಶುಪಾಲ ಗಿರೀಶ್ಚಂದ್ರ ಮತ್ತಿತರರು ಹಾಜರಿದ್ದರು.