ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ವಠಾರದಲ್ಲಿ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಅನ್ನು ಭಾರತೀಯ ಜೈನ್ ಮಿಲನ್ ಬಂಟ್ವಾಳ ಸದಸ್ಯರು ಒದಗಿಸಿಕೊಟ್ಟಿದ್ದಾರೆ.
ಮಿಲನ್ನ ಹಿರಿಯ ಸದಸ್ಯರಾದ ಅನಂತ್ರಾಜ್ ಜೈನ್ ಪೆರಿಯಾರು ಗುತ್ತು, ಫಿಲ್ಟರ್ನ ಕೀಯನ್ನು ಹಸ್ತಾಂತರಿಸುವ ಮೂಲಕ, ಡಾ| ಹೆಗ್ಗಡೆಯವರ ಪಟ್ಟಾಭಿಷೇಕದ ಸವಿನೆನಪಿಗಾಗಿ ಭಾರತೀಯ ಜೈನ್ ಮಿಲನ್ ವಲಯ–೮ ರ ಆಶ್ರಯದಲ್ಲಿ ೫೦ ಸಾವಿರ ಗಿಡಗಳನ್ನು ಹಾಗೂ ೫೦ ವಾಟರ್ ಫಿಲ್ಟರ್ಗಳನ್ನು ನೀಡುವ ಕಾರ್ಯದಲ್ಲಿ ಬಂಟ್ವಾಳ ಜೈನ್ ಮಿಲನ್, ಸಮಾಜಕ್ಕೆ ಅರ್ಪಿಸುವ ಕೆಲಸವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಭಾರತೀಯ ಜೈನ್ ಮಿಲನ್ ವಲಯ ೮ರ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ವಲಯ ೮ರ ನಿರ್ದೇಶಕ ಸುದರ್ಶನ್ ಜೈನ್, ಮಾಜಿ ಅಧ್ಯಕ್ಷರಾದ ಅರ್ಕಕೀರ್ತಿ ಇಂದ್ರ, ಉಪಾಧ್ಯಕ್ಷರಾದ ಡಾ| ಸುದೀಪ್ ಸಿದ್ದಕಟ್ಟೆ, ಮಮತಾ ಎ. ಜೈನ್, ಭರತ್ರಾಜ್ ಪಾಪುದಡ್ಕ, ಮಹಾವೀರ ಅಜ್ರಿ ಉಪಸ್ಥಿತರಿದ್ದರು.ಚಂದನಾ ಪ್ರಾರ್ಥಿಸಿದರು. ಚಂದ್ರಕಾಂತ ಜೈನ್ ಸ್ವಾಗತಿಸಿದರು. ಗೀತಾ ಜಿನಚಂದ್ರ ವಂದಿಸಿದರು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…