ಕೇಂದ್ರ ಸಚಿವ ಅನಂತಕುಮಾರ್ ಹಿಂದೆ 1983ರಲ್ಲಿ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಂದರ್ಭ ಬಂಟ್ವಾಳಕ್ಕೆ ಆಗಮಿಸಿದಾಗ ಸಂಘಟನೆಯನ್ನು ಬಲಪಡಿಸುವುದರ ಮೂಲಕ ಸಂಚಲನ ಮೂಡಿಸಿದ್ದರು ಎಂದು ಅಂದು ಅನಂತ್ ಒಡನಾಡಿಯಾಗಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ ಹೇಳಿದರು.
ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಕ್ಷೇತ್ರ ಸಮಿತಿ ವತಿಯಿಂದ ನಡೆದ ಅನಂತ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಇವರ ಅಕಾಲಿಕ ಮರಣ ಪಕ್ಷಕ್ಕೆ ತುಂಬಲಾರದ ನಷ್ಟ ವಾಗಿದೆ. ನನಗೆ ಅತೀವ ನೋವುಂಟು ಮಾಡಿದೆ 1986 ರಲ್ಲಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದಗಲೂ ಬಂಟ್ವಾಳಕ್ಕೆ ಆಗಮಿಸಿ ಬಂಟ್ವಾಳ ಕ್ಷೇತ್ರದ್ಯಾದಂತ ಸಂಚರಿಸಿದ್ದರು. ಬಂಟ್ವಾಳಕ್ಕೆ ಪ್ರತಿ ಬಾರಿ ಬಂದಾಗಲೂ ತನ್ನನ್ನು ಮಾತನಾಡಿಸದೆ ಹೋಗುತ್ತಿರಲಿಲ್ಲ ಎಂದು ಜ್ಞಾಪಿಸಿಕೊಂಡರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ನುಡಿನಮನ ಸಲ್ಲಿಸಿದರು.
ಜಿಲ್ಲಾ ಬಿ.ಜೆ.ಪಿ ಕಾರ್ಯದರ್ಶಿ ಸುಗುಣ ಕಿಣಿ, ಕ್ಷೇತ್ರದ ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ, ಗೋವಿಂದ ಪ್ರಭು, ಜಿಲ್ಲಾ ಪಂ.ಸದಸ್ಯೆ ಕಮಲಾಕ್ಷಿ ಪೂಜಾರಿ, ವಿಜಯ ರೈ, ಶ್ರೀಕಾಂತ್ ಶೆಟ್ಟಿ, ಗಣೇಶ್ ರೈ, ರಮಾನಾಥ ರೈ, ಸೀತಾರಾಮ ಪೂಜಾರಿ, ರವೀಂದ್ರ ಕಂಬಳಿ, ವಜ್ರನಾಥ ಕಲ್ಲಡ್ಕ, ತನಿಯಪ್ಪ ಗೌಡ, ಪುರುಷೋತ್ತಮ ಶೆಟ್ಟಿ, ಸಂತೋಷ್ ಕುಮಾರ್,ವಿಠಲ್ ನಾಯ್ಕ, ಗೋಪಾಲ್ ಸುವರ್ಣ, ಪ್ರಮೋದ್ ಕುಮಾರ್, ಗುರುದತ್ ನಾಯಕ್, ವಿರೇಂದ್ರ ಕುಲಾಲ್, ಪಂ.ಸಮಿತಿಯ ಅಧ್ಯಕ್ಷ ಕಾರ್ಯದರ್ಶಿಗಳು, ಪುರಸಭಾ ಸದಸ್ಯರುಗಳು ಉಪಸ್ಥಿತರಿದ್ದರು.