ಭಾನುವಾರ ಬೆಳಗ್ಗೆ ಉಜಿರೆ ಸಮೀಪ ಗುರಿಪಳ್ಳ ಕ್ರಾಸ್ ಅಳಪೆ ರಸ್ತೆ ಬಳಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಮುಖಕ್ಕೆ ಟೇಪ್ ಸುತ್ತಿ, ಕಾಲು ಕಟ್ಟಿದ ರೀತಿಯಲ್ಲಿ ಶವ ಕಂಡುಬಂದಿದ್ದು, ಯುವಕನನ್ನು ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇದುವರೆಗೂ ಯುವಕ ಯಾರು ಎಂದು ಗೊತ್ತಾಗಿಲ್ಲ. ಈತನ ಪ್ರಾಯ ಸುಮಾರು 29 ಆಗಿರಬಹುದು ಎಂದು ಶಂಕಿಸಲಾಗಿದ್ದು, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್, ಎಸ್.ಐ. ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.