ಬಂಟ್ವಾಳ

ಒಂದು ತಿಂಗಳೊಳಗೆ 94ಸಿ ಹಕ್ಕುಪತ್ರ ವಿತರಣೆಗೆ ಕ್ರಮ: ಅಧಿಕಾರಿಗಳಿಗೆ ಸೂಚನೆ

ಒಂದು ತಿಂಗಳೊಳಗಾಗಿ 94ಸಿ ಯೋಜನೆಯಡಿ ಫಲಾನುಭವಿಗಳ ಅರ್ಜಿ ಯನ್ನು ವಿಲೇಮಾಡಿ ಹಕ್ಕುಪತ್ರ ವಿತರಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ತಿಳಿಸಿದ್ದಾರೆ.


ಬಂಟ್ವಾಳ ತಾಲೂಕು ಆಡಳಿತ ವತಿಯಿಂದ ಮೆಲ್ಲಾರ್ ನಲ್ಲಿ ಶನಿವಾರ ಮೆಲ್ಕಾರ್ ನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಕ್ಕುಪತ್ರ ವಿತರಣೆಗಾಗಿ ಶಾಸಕರ ಸಹಿತ ಜನಪ್ರತಿನಿಧಿಗಳನ್ನು ಕಾಯಬೇಕಾಗಿಲ್ಲ,ಅಧಿಕಾರಿಗಳ ಮಟ್ಟದಲ್ಲೇ ವಿತರಿಸುವಂತೆ ಸಲಹೆ ನೀಡಿದರು. ಆರ್ಹ ಫಲಾನುಭವಿಗಳಿಗೆ ಸರಕಾರದ ಸವಲತ್ತು ಸಹಿತ ಹಕ್ಕುಪತ್ರ ಕೊಡುವುದಷ್ಟೆ ಮುಖ್ಯವಾಗಿದ್ದು ,ಅದನ್ನು ಯಾರು ವಿತರಿಸಬೇಕೆಂಬುದು ಇಲ್ಲಿ ಮುಖ್ಯವಲ್ಲ, ತಾನು ಶಾಸಕನಾದ ಬಳಿಕ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವಲ್ಲಿ ಪಕ್ಷ ಭೇದ ಮಾಡಿಲ್ಲ, ಆರ್ಹರನ್ನು ಗುರುತಿಸಿ ಸರಕಾರದ ಸವಲತ್ತುನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಹೊರತು ಕೊಡದಂತೆ ಸೂಚಿಸಿಲ್ಲ ಎಂದು ಸ್ಪಷ್ಟ ಪಡಿಸಿದರು.

ಜಿಲ್ಲೆಯನ್ನು ಕಾಡುತ್ತಿರುವ ಮರಳು ಸಮಸ್ಯೆಯನ್ನು ತಕ್ಷಣ ಬಗೆಹರಿಸಿ,ಕಡಿಮೆ ದರದಲ್ಲಿ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ ಶಾಸಕರು ಕಾನೂನಾತ್ಮಕವಾಗಿ ,ಭೂ ಪರಿವರ್ತನೆ, 9/11 ಸಮಸ್ಯೆ, ಅಡಕೆ ಕೊಳೆರೋಗ ಬಾಧಿತರಿಗೆ ಇನ್ನು ಪರಿಹಾರ ಸಿಗದಿರುವುದು, ಸರಕಾರದ ಅನುದಾನ ತಾಲೂಕುವಾರು ವಿಂಗಡಣೆ,ಅತಿಥಿ ಶಿಕ್ಷಕರಿಗೆ ಸಿಗುವ ವೇತನದಲ್ಲಿ ಆಗುತ್ತಿರುವ ತಾಂತ್ರಿಕ ತೊಂದರೆಯನ್ನು ಇತ್ಯರ್ಥ ಪಡಿಸಲು ಕ್ರಮಕೈಗೊಳ್ಳುವಂತೆಯು ಜಿಲ್ಲಾಧಿಕಾರಿಯವರನ್ನು ಕೋರಿದರು.

ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅಧ್ಯಕ್ಷತೆ ವಹಿಸಿದರು. ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ,ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ತಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಎಂ ಬಂಗೇರ, ಜಿ .ಪಂ .ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್.ಮಹಮ್ಮದ್, ತುಂಗಪ್ಪ ಬಂಗೇರ,ಮಮತಾ ಗಟ್ಟಿರವೀಂದ್ರ ಕಂಬಳಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೇಲ್ವಮನಿ,ಮಂಗಳೂರು ಸಹಾಯಕ ಕಮಿಷನರ್ ರವಿಚಂದ್ರ ನಾಯಕ್,ಬಂಟ್ವಾಳ ಉಪವಿಭಾಗದ ಎಎಸ್ಪಿ ಹೃಷಿಕೇಶ್ ಮೊದಲಾದವರು ವೇದಿಕೆಯಲ್ಲಿದ್ದರು.

ಈ ಮೊದಲು ತಾಲೂಕು ಕಚೇರಿಯಲ್ಲಿ ಸ್ವೀಕರಿಸಲಾದ ಸೇರಿದಂತೆ ಒಟ್ಟು 72 ಅರ್ಜಿಗಳ ಪೈಕಿ 26 ಅರ್ಜಿಯನ್ನು ಸಭೆಯಲ್ಲಿ ವಿಲೇ ಮಾಡಲಾಯಿತು.ಹಾಗೆಯೇ ಉಳಿದ ಅರ್ಜಿಗಳನ್ನು ವಿಲೇಗೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ವಿವಿಧ ಇಲಾಖೆಗೆ ಕಳುಹಿಸಲಾಯಿತು.ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ರಾವ್ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ