ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಶಬರಿಮಲೆ ಉಳಿಸಿ ಎಂಬ ಉದ್ದೇಶವನ್ನಿಟ್ಟುಕೊಂಡು ಸೋಮವಾರ ಬಿ.ಸಿ.ರೋಡಿನಲ್ಲಿ ಸಭೆ, ಸತ್ಯಾಗ್ರಹವೊಂದು ಶಾಸಕರ ಉಪಸ್ಥಿತಿಯಲ್ಲಿ ಸಭೆ, ಸತ್ಯಾಗ್ರಹ ನಡೆದಿತ್ತು. ಇದೀಗ ನ.2ರಂದು ಕಲ್ಲಡ್ಕದಲ್ಲಿ ಭಜನೆ, ಮೆರವಣಿಗೆ, ಸಭೆ ನಡೆಯಲಿದೆ.
ಹಿಂದು ಜಾಗರಣಾ ವೇದಿಕೆಯ ವಿಟ್ಲ ತಾಲೂಕು ಮತ್ತು ಶ್ರೀರಾಮ ಮಂದಿರ ಕಲ್ಲಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಸಹಿತ ಎಲ್ಲಾ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಎಲ್ಲ ಹಿಂದು ಸಂಘಟನೆಗಳು, ಅಯ್ಯಪ್ಪ ಭಕ್ತರ ಸಹಯೋಗದೊಂದಿಗೆ ಶುಕ್ರವಾರ ನ.2ರಂದು ಮಧ್ಯಾಹ್ನ 2.30ಕ್ಕೆ ಕಲ್ಲಡ್ಕ ಶ್ರೀರಾಮ ಮಂದಿರ ಮುಂಭಾಗ, ಶ್ರೀ ಅಯ್ಯಪ್ಪ ಸ್ವಾಮಿಯ ಶಬರಿಮಲೆ ಕ್ಷೇತ್ರ ಉಳಿಸಿ ಹೋರಾಟದ ಅಂಗವಾಗಿ ಮೆರವಣಿಗೆ ಮತ್ತು ಸಭೆ ನಡೆಯಲಿದೆ.
ಈ ಸಂದರ್ಭ ಭಜನೆ, ಸಭಾ ಕಾರ್ಯಕ್ರಮ ಇರಲಿದೆ ಎಂದು ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ವಿಟ್ಲ ತಾಲೂಕು ಅಧ್ಯಕ್ಷ ನರಸಿಂಹ ಶೆಟ್ಟಿ ಮಾಣಿ, ಪುತ್ತೂರು ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ, ತಾಲೂಕು ಪ್ರಧಾನ ಕಾರ್ಯದರ್ಶಿ ಗಣರಾಜ ಭಟ್ ಕೆದಿಲ, ತಾಲೂಕು ಕಾರ್ಯದರ್ಶಿ ಮನೋಜ್ ಪೆರ್ನೆ, ತಾಲೂಕು ಕಾರ್ಯದರ್ಶಿ ರವಿ ಭಂಡಾರಿ, ತಾಲೂಕು ಕಾರ್ಯದರ್ಶಿ ರಾಜೇಶ್ ನಾಯ್ಕ್, ಜಿಲ್ಲಾ ವಕೀಲರ ವೇದಿಕೆ ಪ್ರಮುಖ ಅರುಣ ಗಣಪತಿ, ಹಿಂದು ಜಾಗರಣಾ ವೇದಿಕೆಯ ನಾಗೇಶ್ ಬೊಂಡಾಲ, ಮುಖೇಶ್ ಮೇಲ್ಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಮವಾರವೂ ನಡೆದಿತ್ತು:
ಸೋಮವಾರ ಬಂಟ್ವಾಳ ತಾಲೂಕು ಅಯ್ಯಪ್ಪ ಭಕ್ತ ವೃಂದದ ವತಿಯಿಂದ ಒಂದುದಿನದ ಉಪವಾಸ ಸತ್ಯಾಗ್ರಹ,ಭಜನೆ ಸೋಮವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ನಡೆಯಿತು.ಬೆಳಿಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ದೀಪ ಬೆಳಗಿಸುವ ಮೂಲಕ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ಬಳಿಕ ಭಜನಾ ಕಾರ್ಯಕ್ರಮ ಆರಂಭಗೊಂಡಿತು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಭಾಗವಹಿಸಿ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದಲ್ಲಿ ಹಿಂದೂಗಳ ನಂಬಿಕೆ,ಸಂಪ್ರದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ಅಕ್ರಮಣದ ವಿರುದ್ದ ಹಿಂದೂ ಸಮಾಜ ಎದ್ದುನಿಲ್ಲಬೇಕಾದ ಕಾಲ ಸನ್ನಿಹಿತವಾಗಿದೆ ಎಂದರು. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಅವರು ಭಾಗವಹಿಸಿ ಆಶೀರ್ವಚನಗೈದು ಭಜನೆಯಲ್ಲು ಪಾಲ್ಗೊಂಡರು. ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಭಟ್,ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಉಪಾಧ್ಯಕ್ಷೆ ಕಸ್ತೂರಿ ಪಂಜ,ಸದಸ್ಯ ತುಂಗಪ್ಪ ಬಂಗೇರ ,ರವೀಂದ್ರಕಂಬಳಿ, ಮಾಜಿಸದಸ್ಯ ಚೆನ್ನಪ್ಪಕೋಟ್ಯಾನ್,ಬಿಜೆಪಿ ಮುಖಂಡರಾದ ಜಿ.ಆನಂದ, ದಿನೇಶ್ ಅಮ್ಟೂರು, ರಾಮದಾಸ ಬಂಟ್ವಾಳ,ಮೋನಪ್ಪ ದೇವಸ್ಯ,ನಾರಾಯಣ ಪೂಜಾರಿ ಬೊಳ್ಳುಕಲ್ಲು,ರಮಾನಾಥ ರಾಯಿ, ಗೋವಿಂದಪ್ರಭು, ಉದಯಕುಮಾರ್ ರಾವ್, ಪುರುಷೋತ್ತಮಶೆಟ್ಟಿ ವಾಮದಪದವು,ವಿಜಯ ರೈ, ಶ್ರೀಕಾಂತ ಶೆಟ್ಟಿ ಸಜೀಪ, ಮುಂಬೈಯ ಕಾರ್ಪೊರೇಟರ್ ಸಂತೋಷ ಶೆಟ್ಟಿ ದಲಂಬಿಲ, ಪ್ರಭಾಕರ ಪ್ರಭು, ನಂದನರಾಮರೈ,ಗಣೇಶ್ ರೈ ಮಾಣಿ,ಷುರುಷ ಎನ್. ಸಾಲಿಯಾನ್, ಸಂಘಪರಿವಾರ ಸಂಘಟನೆಯ ಮುಖಂಡರಾದ ರಾಧಕೃಷ್ಣ ಅಡ್ಯಂತಾಯ,ರವಿರಾಜ ಬಿ.ಸಿ.ರೋಡ್ ,ಉಮೇಶ್ ಅರಳ, ವಕೀಲ ಪ್ರಸಾದ್ ಕುಮಾರ್ ರೈ, ವೆಂಕಟೇಶ್ ನಾವುಡ ಪೊಳಲಿ,ಗಂಗಾಧರ ಪರಾರಿ, ಪುರಸಭಾ ಸದಸ್ಯೆ ವಿದ್ಯಾವತಿ ಪ್ರಮೋದ್ ಕುಮಾರ್ ,ಮಾಜಿ ಸದಸ್ಯೆ ಯಶೋಧ ಹಾಗೂ ಅಯ್ಯಪ್ಪ ಭಕ್ತವೃಂದ ಸಮಿತಿಯ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.
ಶಾಸಕ ಯು.ರಾಜೇಶ್ ನಾಯ್ಕ್ ,ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ಬೆಳಿಗ್ಗೆಯಿಂದ ಸಂಜೆ ಉಪವಾಸ ಮುಕ್ತಾಯದವರೆಗೂ ಸ್ವತ: ಉಪವಾಸದಲ್ಲಿದ್ದು ಭಜನೆಯಲ್ಲಿ ನಿರತರಾಗಿ ಗಮನಸೆಳೆದರು.
ಸಂಜೆ ಶಾಸಕ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸತ್ಯಾಗ್ರಹದ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಶ್ರೀಕಾಂತ ಶೆಟ್ಟಿ ಅವರು ಸಮಾರೋಪ ಭಾಷಣ ಮಾಡಿ ಶಬರಿಮಲೆ ಕ್ಷೇತ್ರದ ಪಾವಿತ್ರ್ಯದ ಬಗ್ಗೆ ಕೇರಳದ ಕಮ್ಯುನಿಷ್ಠ್ ಸರಕಾರ ಇನ್ನಿಲ್ಲದ ಷಡ್ಯಂತ್ರ ನಡೆಸುತ್ತಿದ್ದು,ಇದರ ವಿರುದ್ದ ಹಿಂದೂ ಸಮಾಜ ಹೋರಾಟಕ್ಕೆ ಸಿದ್ದರಾಗಬೇಕಾಗಿದೆ ಎಂದರು. ಅಯ್ಯಪ್ಪ ಭಕ್ತ ವೃಂದ ಸಮಿತಿಯ ಅಧ್ಯಕ್ಷ ಬೋಜ ಸಾಲಿಯಾನ್,ಸಂಜೀವ ಗುರುಸ್ವಾಮಿ,ರಮಾನಂದ ಸ್ವಾಮಿ,ಉಮೇಶ್ ಸ್ವಾಮಿ,ನಾಗೇಶ್ ಸ್ವಾಮಿ,ಹಿಮಕರ ಸ್ವಾಮಿ,ವಾಸು ಸ್ವಾಮಿ ವೇದಿಕೆಯಲ್ಲಿದ್ದರು.ದೇವದಾಸ ಶೆಟ್ಟಿ ಸ್ವಾಗತಿಸಿ ,ವಂದಿಸಿದರು. ಬಳಿಕ ಶಾಸಕ ರಾಜೇಶ್ ನಾಯ್ಕ್, ಹರಿಕೃಷ್ಣ ಬಂಟ್ವಾಳ ಅವರ ನೇತ್ರತ್ವದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು. ಅಯ್ಯಪ್ಪ ಸ್ವಾಮಿ ಭಾವಚಿತ್ರಕ್ಕೆ ಕರ್ಪೂರಾರತಿ ನಡೆದು,ಉಪಹಾಸ ಸತ್ಯಾಗ್ರಹಕ್ಕೆಮಂಗಳ ಹಾಡಲಾಯಿತು.
ಚಿತ್ರಗಳು ಇಲ್ಲಿವೆ: