ಬಂಟ್ವಾಳ

ವಿದ್ಯಾರ್ಥಿಗಳಿಗೆ ಸರಳ ವಿಜ್ಞಾನ ತಿಳಿಸುವ SCIENCE ON WHEELS

ರೋಟರಿ ಕ್ಲಬ್ ಬಂಟ್ವಾಳದಿಂದ ಕಾರ್ಯಕ್ರಮ, ಬೆಂಜನಪದವಿನಲ್ಲಿ ಚಾಲನೆ

www.bantwalnews.com Editor: Harish Mambady

ಸಂಚಾರಿ ತಾರಾಲಯದ ಮೂಲಕ ತಾಲೂಕಿನ ವಿದ್ಯಾರ್ಥಿಗಳಲ್ಲಿ ಬಾಹ್ಯಕಾಶದ  ಕೌತುಕಗಳನ್ನು ಶಾಲೆ ಆವರಣದಲ್ಲೇ ವೀಕ್ಷಿಸುವ ಅವಕಾಶ ಕಲ್ಪಿಸಿ ಕೊಟ್ಟಿದ್ದ  ಬಂಟ್ವಾಳ ರೋಟರಿ ಕ್ಲಬ್ ಈ ಯಶಸ್ಸಿನ ಪ್ರೇರಣೆ ಪಡೆದು ತನ್ನ ಸುವರ್ಣ ವರ್ಷಾಚರಣೆಯ ಪ್ರಯುಕ್ತ ಶಾಲೆಯಲ್ಲಿಯೇ ಸರಳವಾಗಿ ವಿಜ್ಞಾನವನ್ನು ತಿಳಿದುಕೊಳ್ಳವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದ್ದು ರಾಜ್ಯೋತ್ಸವ ದಿನಾಚರಣೆಯಂದೇ ಈ ಕಾರ್ಯಕ್ರಮಕ್ಕೆ ಬೆಂಜನಪದವಿನ ಸರಕಾರಿ ಪ್ರೌಢಶಾಲೆಯಲ್ಲಿ ಚಾಲನೆ ನೀಡಿದೆ.

ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ನೇತೃತ್ವದಲ್ಲಿ ಸೈನ್ಸ್ ಆನ್ ವೀಲ್ಸ್  ಎನ್ನುವ ಕಾರ್ಯಕ್ರಮದಡಿ ವಿಜ್ಞಾನದ ಕುತೂಹಲ ಹಾಗೂ ವಿವಿಧ ವೈಜ್ಞಾನಿಕ ಆವಿಷ್ಕಾರಗಳ ಬಗ್ಗೆ ಸರಳವಾಗಿ, ಪ್ರಾಯೋಗಾತ್ಮಕವಾಗಿ ಅರಿವು ಮೂಡಿಸುವ ಹಾಗೂ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ  ಕಾರ್ಯಕ್ರಮ ಇದಾಗಿದೆ. ರೋಟರಿ ವಲಯ 4ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಂಟ್ವಾಳ ರೋಟರಿ ಕ್ಲಬ್ 50ನೇ ವರ್ಷಾಚರಣೆಯ ಪ್ರಯುಕ್ತ  ಹಲವಾರು ವಿನೂತನ ಹಾಗೂ ಸ್ಮರಣೀಯವಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಶ್ಲಾಘಿಸಿದರು.

ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಮಾತನಾಡಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ  ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವ್ಯರ್ಥವಾಗಿ ಹೋಗುವ ವಸ್ತುಗಳಲ್ಲೂ ವಿಜ್ಞಾನವನ್ನೂ ವಿಕಾಸ ಗೊಳಿಸುವ ಕುರಿತಾಗಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಮಾಹಿತಿ ಪಡೆಯಲಿದ್ದು ತಮ್ಮದೇ ಆಲೋಚನಾ ಶಕ್ತಿಯಿಂದ ಹೊಸ ಆವಿಷ್ಕಾರಗಳನ್ನು ಮಾಡಲು ಇದರಿಂದ ಸಾಧ್ಯವಿದೆ. ವಿಜ್ಞಾನವೆಂದರೆ ಕಷ್ಟ ಎನ್ನುವ ಮನೋಭಾವ ವಿದ್ಯಾರ್ಥಿಗಳಲ್ಲಿದ್ದು ಅತ್ಯಂತ ಸುಲಭವಾಗಿ ವಿಜ್ಞಾನವನ್ನು ಸೈನ್ಸ್ ಆನ್ ವೀಲ್ಸ್ ಕಾರ್ಯಕ್ರಮದ ಮೂಲಕ ಅರ್ಥೈಸಿಕೊಳ್ಳ ಬಹುದಾಗಿದೆ ಎಂದರು.

ಶಾಲಾಭಿವೃದ್ದಿ ಸಮಿತಿಯ ಕಾರ್ಯಧ್ಯಕ್ಷ  ವಾಮನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ರೋಟರಿ ಕ್ಲಬ್ ಕಾರ್ಯದರ್ಶಿ ಶಿವಾನಿ ಬಾಳಿಗ, ಆನ್ಸ್ ಕ್ಲಬ್ ಅಧ್ಯಕ್ಷೆ ವಿದ್ಯಾ ಅಶ್ವನಿ ಕುಮಾರ್ ರೈ, 50 ನೇ ವರ್ಷಾಚರಣೆ ಸಮಿತಿ ಸಂಚಾಲಕ ಡಾ. ರಮೇಶಾನಂದ ಸೋಮಾಯಜಿ, ನಿಕಟಪೂರ್ವ ಕಾರ್ಯದರ್ಶಿ ನಾಯಯಣ ಹೆಗ್ಡೆ, ಕಾಲೇಜಿನ ಪ್ರಾಂಶುಪಾಲ ಎ.ಟಿ. ಗಿರೀಶ್ಚಂದ್ರ, ಇಂಟರಾಕ್ಟ್ ಕ್ಲಬ್ ಸಂಚಾಲಕಿ ಹೇಮಾ  ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಮುಖ್ಯ ಶಿಕ್ಷಕಿ ಶ್ರೀದೇವಿ ಸ್ವಾಗತಿಸಿದರು, ಪ್ರತಿಭಾ ಭಟ್ ವಂದಿಸಿದರು, ದೇವದಾಸ್ ಕೆ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸೈನ್ಸ್ ಆನ್ ವೀಲ್‌ನ ಕ್ಯುರೇಟರ್‌ಗಳಾದ ಸತೀಶ್ ಹಾಗೂ ಲಕ್ಷ್ಮೀಪತಿ ಬೆಳಕಿನ ಪ್ರತಿಫಲನ, ಬೆಳಕಿನ ವಕ್ರೀಭವನ, ಬಣ್ಣದ ನೆರಳು, ಶಬ್ದಗಳ ವಿವಿಧತೆ, ನೇರಾಳಾತೀತ ಬೆಳಕು, ವಿವಿಧ ಕನ್ನಡಿಗಳ ಪ್ರತಿಬಿಂಬ, ಅನಂತತೆಯ ಬಾವಿ, ವಿದ್ಯುತ್ ಶಕ್ತಿಯಿಂದ ಯಾಂತ್ರೀಕ ಶಕ್ತಿಯ ಉತ್ಪಾದಕತೆ, ಉಪಗ್ರಹ ಉಡ್ಡಾಯನದ ಮಾದರಿ, ಡ್ರೋನ್ ಹಾರಾಟ ಮೊದಲಾದ 30ಕ್ಕಿಂತಲೂ ಅಧಿಕ ಬಗೆಯ ವಿಕ್ಞಾನದ ಕೌತುಕಗಳನ್ನು ವಿದ್ಯಾರ್ಥಿಗಳಿಗೆ  ಕಲಿಸಿಕೊಟ್ಟರು. ಕೆಲ ಪ್ರಯೋಗಗಳನ್ನು ವಿದ್ಯಾರ್ಥಿಗಳು ಮಾಡಿ ಸಂಭ್ರಮಪಟ್ಟರು. ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts