ರೋಟರಿ ಕ್ಲಬ್ ಬಂಟ್ವಾಳ ಟೌನ್ ಹಾಗೂ ಜೇಸೀ ಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ಪೋಲಿಯೊ ಲಸಿಕೆ ನೀಡುವಲ್ಲಿ 33 ವರ್ಷಗಳಿಂದ ಸೇವೆ ಸಲ್ಲಿಸಿದ ಹಿರಿಯ ಆರೋಗ್ಯ ಸಹಾಯಕಿ ವಸಂತಿಯವರಿಗೆ ಅವರ ನಿವೃತ್ತಿಯ ಅಂಚಿನಲ್ಲಿ ಸನ್ಮಾನ ಸಮಾರಂಭ ನಡೆಯಿತು.
ರೋಟರಿ ಸಭಾಂಗಣ ಬಿ.ಸಿ.ರೋಡು ಇಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ರಾದ ಉಮೇಶ್ ನಿರ್ಮಲ್ ಸನ್ಮಾನ ನೆರವೇರಿಸಿ ಮಾತನಾಡಿದರು. ರೋಟರಿ ಜಾಗತಿಕ ಮಟ್ಟದಲ್ಲಿ ಪೋಲಿಯೊ ಮುಕ್ತ ಮಾಡಲು ಶ್ರಮಿಸುತ್ತಿದ್ದು , ಶೇಕಡಾ 99ರಷ್ಟು ಪ್ರಗತಿ ಸಾಧಿಸಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುವ ತಳಮಟ್ಟದ ಕಾರ್ಯಕರ್ತರಾದ ಆರೋಗ್ಯ ಸಹಾಯಕಿಯವರ ಕೆಲಸ ಸ್ಮರಿಣೀಯ ಎಂದು ವಸಂತಿಯವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಸಮಾರಂಭದ ಅಧ್ಯಕ್ಷತೆ ಯನ್ನು ಜೇಸೀ ಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷ ರಾದ ಸವಿತಾ ನಿರ್ಮಲ್ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಜೇಸೀ ಐ ಮಂಗಳೂರು ಸಾಮ್ರಾಟ್ ಇದರ ಅಧ್ಯಕ್ಷ ರಾದ ಡಾ ರಾಘವೇಂದ್ರ ಹೊಳ್ಳ, ಹರ್ಷಿತಾ ಎಂ ವಿ ಬದಿಯಾರ್ , ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಶಾಂತ್ ರಾಜ್, ಮಂಜುಳಾ ಶಾಂತ್ ರಾಜ್, ಯುವ ಜೇಸಿ ಅಧ್ಯಕ್ಷೆ ದಿವ್ಯಾ ಉಪಸ್ತಿತರಿದ್ದರು. ಕಾರ್ಯದರ್ಶಿ ಹರ್ಷರಾಜ್ ಧನ್ಯವಾದ ಸಲ್ಲಿಸಿದರು.