ಬಂಟ್ವಾಳ

28ಮತ್ತು 29 ರಂದು ಸಿರಿಧಾನ್ಯಗಳ‌ ಆಹಾರ ಮೇಳ

ಬಂಟ್ವಾಳ: ಆರೋಗ್ಯಕರ ಆಹಾರ ಪದ್ದತಿ ಜಾರಿಗೆ ತರುವ ಉದ್ದೇಶದಿಂದ ಅಕ್ಟೋಬರ್ 28ಮತ್ತು 29 ರಂದು ಎರಡು ದಿನಗಳ ಸಿರಿಧಾನ್ಯಗಳ‌ ಆಹಾರ ಮೇಳ ವನ್ನು ಬಿ.ಸಿ.ರೋಡಿನ ಉದ್ಯಾನವನದ ಬಳಿರುವ ಸ್ಪರ್ಶ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ.ಕ್ಷೇ.ಧರ್ಮಸ್ಥಳದ ಸಿರಿ ಗ್ರಾಮೋದ್ಯಗ ಸಂಸ್ಥೆಯ ಮಾರುಕಟ್ಟೆ ಅಧಿಕಾರಿ ರಾಮ್ ಕುಮಾರ್ ತಿಳಿಸಿದ್ದಾರೆ.

ಜಾಹೀರಾತು

ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುಷ್ಯನ ದೇಹಕ್ಕೆ ಬೇಕಾದಂತ ಪೋಷಕಾಂಶ ಹಾಗೂ ಆರೋಗ್ಯ ಕಾಪಾಡುವಲ್ಲಿಸಿರಿಧಾನ್ಯಗಳ ಮಹತ್ವತೆಯ ಕುರಿತು ಮಾಹಿತಿಯನ್ನು ಈ ಸಂದರ್ಭ ನೀಡಲಾಗುವುದು ಎಂದರು.

ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕೊರತೆಯಿಂದ ಕಣ್ಮರೆಯಾದ ನವಣೆ,ಸಾವೆ,ಉದಲು,ಹಾರಕ,ಕೊರಳೆ,ಸಜ್ಜೆ,ಜೋಳ,ಬರಗು ಮತ್ತು ರಾಗಿಯಂತಹ ಆರೋಗ್ಯ ಪದ್ದತಿಯನ್ನು, ಪುನರ್ ಬಳಕೆಯಾಗುವಂತೆ ಮತ್ತು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಆಹಾರಮೇಳ ಆಯೋಜಿಸಲಾಗುತ್ತಿದೆ ಎಂದರು.

ಒಂದೊಂದು ಧಾನ್ಯವು ಒಂದೊಂದು ವಿಶೇಷತೆಯನ್ನು ಹೊಂದಿದ್ದು,ಸಕ್ಕರೆ ಕಾಯಿಲೆ ನಿಯಂತ್ರಿಸಲು,ರಕ್ತದಲ್ಲಿನ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಕಡಿಮೆ ಮಾಡುವಲ್ಲಿ ಸಿರಿಧಾನ್ಯ ನೆರವಾಗುತ್ತದೆ ಎಂದು ವಿವರಿಸಿದ ರಾಮ್ ಕುಮಾರ್‌ ಸಿರಿಧಾನ್ಯದಲ್ಲಿ ನಾರಿನಾಂಶ ತುಂಬಿರುವುದರಿಂದ ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ರಾಜ್ಯದ 13 ಕಡೆಗಳಲ್ಲಿ ಈಗಾಗಲೇ ಇಂತಹ ಕಾರ್ಯಕ್ರಮ ನಡೆಸಲಾಗಿದ್ದು,ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದ.ಕ.ಜಿಲ್ಲೆಯಲ್ಲಿ ಇದೇ ಮೊದಲಬಾರಿಗೆ ಸಿರಿಧಾನ್ಯಗಳ ಮಾರಾಟ ಮತ್ತು ಪ್ರದರ್ಶನ ನಡೆಸಲಾಗುತ್ತಿದೆ . ಮಳಿಗೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾದ ತಿಂಡಿ, ತಿನಿಸು ಲಭ್ಯವಿರುತ್ತದೆ ಎಂದರು.

ಶ್ರೀಧ.ಸಿರಿಗ್ರಾಮೋದ್ಯಗಸಂಸ್ಥೆಲಾಯಿಲ,ಬೆಳ್ತಂಗಡಿ, ಶ್ರೀ.ಕೇ.ಧ.ಗ್ರಾ.ಯೋ.ಬಂಟ್ವಾಳ ತಾಲೂಕು, ರೋಟರಿ ಕ್ಲಬ್ ,ಲಯನ್ಸ್ ಕ್ಲಬ್ ಬಂಟ್ವಾಳ,ಸೇವಾಂಜಲಿ ಪ್ರತಿಷ್ಠಾನ ಫರಂಗೀಪೇಟೆ ಆಶ್ರಯದಲ್ಲಿ ನಡೆಯುವ ಆಹಾರಮೇಳವನ್ನು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್  ಉದ್ಘಾಟಿಸಲಿದ್ದು,ಮಳಿಗೆಯನ್ನು ಮಹಾವೀರ ಅಜ್ರಿ ಉದ್ಘಾಟಿಸುವರು,ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ.ಕ್ಷೇ.ಧ.ಗ್ರಾ.ಯೋ.ಯ ಮೇಲ್ವಿಚಾರಕರಾದ ಶಶಿಧರ್,ರಮೇಶ್ ಮೊದಲಾದವರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.