ಪೊಲಿಯೋ ವಿರುದ್ಧ ಅಭಿಯಾನದಲ್ಲಿ ರೋಟರಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ಪೊಲೀಯೋವನ್ನು ಶೂನ್ಯವಾಗಿಸಲು ಪ್ರಯತ್ನ ನಡೆದಿದೆ ಎಂದು ರೋಟರಿ ಜಿಲ್ಲೆ – 3181 ಇದರ ಜಿಲ್ಲಾ ಗವರ್ನರ್ ರೋಹಿನಾಥ್ ಪಾದೆ ಹೇಳಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ರೋಟರಿ ಗವರ್ನರ್ ಅಧಿಕೃತ ಭೇಟಿ ಸಮಾರಂಭದಲ್ಲಿ ಆಶಾಸ್ಪೂರ್ತಿ ಯೋಜನೆಯ ಸವಲತ್ತು ವಿತರಣೆ ಹಾಗೂ ರೋಟರಿ ಸಂತ್ರಸ್ತರ ನಿಧಿಗೆ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ಹಸ್ತಾಂತರ ಮಾಡಿ ಮಾತನಾಡಿದರು.
ರೋಟರಿ ಫೌಂಡೇಷನ್ ದೇಣಿಗೆಯನ್ನು ಜಾಗತಿಕ ಮಟ್ಟದಲ್ಲಿ ಬಡ ಜನರಿಗೆ ಆರೋಗ್ಯ ಸೇವೆ, ಶಾಶ್ವತ ಯೋಜನೆಗೆ, ಶೈಕ್ಷಣಿಕ ಅನುದಾನಕ್ಕೆ ಪಾರದರ್ಶಕತೆಯಿಂದ ವ್ಯವಹರಿಸುತ್ತಿರುವ ಜಗತ್ತಿನ ಅತಿ ದೊಡ್ಡ ಸಂಘಟನೆ ಎಂದು ಹೇಳಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್, ವಲಯ ಸೇನಾನಿ ಸಂಜೀವ ಪೂಜಾರಿ ಗುರುಕೃಪ, ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷ ರಾದ ಮಂಜುನಾಥ್ ಆಚಾರ್ಯ ಉಪಸ್ತಿತರಿದ್ದರು. ಸಮಾರಂಭದ ಅಧ್ಯಕ್ಷತೆ ಯನ್ನು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ರಾದ ಉಮೇಶ್ ನಿರ್ಮಲ್ ವಹಿಸಿದ್ದರು. ಕಾರ್ಯದರ್ಶಿ ಜಯರಾಜ್ ಎಸ್ ಬಂಗೇರ ಧನ್ಯವಾದ ಸಮರ್ಪಣೆ ಮಾಡಿದರು. ರಾಜಕುಮಾರ್ ಪ್ರಾಯೋಜಕರಾಗಿ ನಾವೂರು ಅಂಗನವಾಡಿಯ ಶೀಟ್ ಅಳವಡಿಕೆಗೆ ಸಹಾಯ ಧನ ನೀಡಿದರು .ರೋಟರಿ ಫೌಂಡೇಷನ್ ಗೆ ದಯಾನಂದ ಶೆಟ್ಟಿ ಹಾಗೂ ಶಂಕರ್ ಶೆಟ್ಟಿ ದೇಣಿಗೆ ನೀಡಿದರು. ಆನ್ಸ್ ಕ್ಲಬ್ ಅಧ್ಯಕ್ಷರಾದ ಆಶಾಮಣಿ ಡಿ ರೈ 1 ಲಕ್ಷದ ದೇಣಿಗೆಯನ್ನು ಗವರ್ನರ್ ರಿಗೆ ಹಸ್ತಾಂತರ ಮಾಡಿದರು. ಕಾರ್ಯದರ್ಶಿ ಜಯರಾಜ್ ಎಸ್ ಬಂಗೇರ ಧನ್ಯವಾದ ಸಮರ್ಪಣೆ ಮಾಡಿದರು.