ಬಂಟ್ವಾಳ

ವಲಯ ಸ್ಪರ್ಧೆಯಲ್ಲಿ ಬಂಟ್ವಾಳ ರೋಟರಿ ಕ್ಲಬ್ ಗೆ 10 ಬಹುಮಾನ

ಬೆಳ್ತಂಗಡಿ ರೋಟರೀ ಕ್ಲಬ್ ನ ಆತಿಥ್ಯದಲ್ಲಿ ಭಾನುವಾರ  ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜಿನ ಸಭಾಭವನದಲ್ಲಿ ನಡೆದ ರೋಟರಿ ಜಿಲ್ಲೆ 3181,ರೋಟರಿ ವಲಯ 4ರ ಸಾಂಸ್ಕೃತಿಕ ಸ್ಪರ್ಧೇಯಲ್ಲಿ ಬಂಟ್ವಾಳ ರೋಟರಿ ಕ್ಲಬ್ 10 ಬಹುಮಾನಗಳನ್ನು ಗಳಿಸುವುದರ ಮೂಲಕ ಪ್ರಥಮ ರನ್ನರ್‍ಸ್ ಅಪ್ ಆಗಿ ಮೂಡಿಬಂದಿದೆ.

ಜಾಹೀರಾತು

11 ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ 10 ಬಹುಮಾನಗಳನ್ನು ಪಡೆದುಕೊಂಡಿದ್ದು, ತನ್ನ 50ನೇ ವರ್ಷಾಚರಣೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದುಕೊಂಡಿದೆ. ರೊಟೇರಿಯನ್ ಗಾಯನ ಸ್ಪರ್ಧೆಯಲ್ಲಿ ಬಸ್ತಿ ಮಾಧವ ಶೆಣೈ ತೃತೀಯ ಬಹುಮಾನ, ಆನ್ಸ್ ವಿಭಾಗದ ಹಾಡುಗಾರಿಕೆಯಲ್ಲಿ ಪ್ರೇಮಲತಾ ರಾವ್ ದ್ವಿತೀಯ ಬಹುಮಾನ, 14 ವರ್ಷದ ಮೇಲ್ಪಟ್ಟ ಆನೆಟ್ಸ್ ಗಾಯನ ಸ್ಪರ್ಧೆಯಲ್ಲಿ ಅಶ್ವಿನಿ ಬಾಳಿಗಾ ಪ್ರಥಮ ಬಹುಮಾನ, 14 ವರ್ಷಕ್ಕಿಂತ ಕೆಳಗಿನ ಆನೆಟ್ಸ್ ವಿಭಾಗದ ಗಾಯನ ಸ್ಪರ್ಧೆಯಲ್ಲಿ ಪ್ರಣಮ್ಯ ರಾವ್ ತೃತೀಯ ಬಹುಮಾನ, ಯುಗಳ ಗೀತೆ ಸ್ಪರ್ಧೆಯಲ್ಲಿ ಬಸ್ತಿ ಮಾಧವ ಶೆಣೈ ಹಾಗೂ ಮಹಿಮಾ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. 14 ವರ್ಷದ ಮೇಲ್ಪಟ್ಟ ಆನೆಟ್ಸ್ ವಿಭಾಗದ ನೃತ್ಯ ಸ್ಪರ್ಧೆಯಲ್ಲಿ ಅಶ್ವಿನಿ ಬಾಳಿಗಾ ತೃತೀಯ ಬಹುಮಾನ, 14 ವರ್ಷಕ್ಕಿಂತ ಕೆಳಗಿನ ಆನೆಟ್ಸ್ ವಿಭಾಗದ ನೃತ್ಯಸ್ಪರ್ಧೆಯಲ್ಲಿ  ಪ್ರಣಮ್ಯ ರಾವ್ ಪ್ರಥಮ ಸ್ಥಾನಗಳಿಸಿದ್ದಾರೆ. ಸಮೂಹ ಗಾನ ಸ್ಪರ್ಧೆಯಲ್ಲಿ ಬಂಟ್ವಾಳ ರೋಟರೀ ಕ್ಲಬ್ ದ್ವಿತೀಯ ಬಹುಮಾನ ಹಾಗೂ ಮೂಕಾಭಿನಯದಲ್ಲಿ ತೃತೀಯ ಸ್ಥಾನ ಗಳಿಸಿದೆ. ಪ್ರಹಸನ ವಿಭಾಗದಲ್ಲಿ ಬಂಟ್ವಾಳ ರೋಟರೀ ಕ್ಲಬ್ ಪ್ರಸ್ತುತ ಪಡಿಸಿದ “ಅಯ್ಯೋ ನೇತ್ರಾವತಿ” ಪ್ರಥಮ ಸ್ಥಾನಗಳಿಸಿ , ಸೋಮವಾರ ಪೇಟೆಯಲ್ಲಿ ನಡೆಯಲಿರುವ ರೋಟರೀ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಬಂಟ್ವಾಳ ರೋಟರೀಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಕಾರ್ಯದರ್ಶಿ ಶಿವಾನಿಬಾಳಿಗಾ  ನೇತೃತ್ವದಲ್ಲಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಂಟ್ವಾಳ ರೋಟರೀಕ್ಲಬ್ ನ 30ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು. ವಲಯ 4ರ ಉಪರಾಜ್ಯಪಾಲ ಪ್ರಕಾಶ್ ಕಾರಂತ್, ಬಂಟ್ವಾಳ ರೋಟರಿ ಆನ್ಸ್ ಅಧ್ಯಕ್ಷೆ ವಿದ್ಯಾ ಎ.ರೈ  ಕೂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಥ್ ನೀಡಿ ಸದಸ್ಯರಿಗೆ ಹುರುಪು ತುಂಬಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಪ್ರಸಾದ್, ವಲಯ ಕೋ ಆರ್ಡಿನೇಟರ್ ಶ್ರೀಕಾಂತ್ ಕಾಮತ್, ವಲಯ ಲೆಫ್ಟಿನೆಂಟ್ ಡಾ.ಸುಧೀರ್ ಪ್ರಭು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಬಿ.ವಿ.ಕಾರಂತ ಹುಟ್ಟಿದ ತಾಲೂಕಲ್ಲಿ ಸುಸಜ್ಜಿತ ರಂಗಮಂದಿರವೇ ಇಲ್ಲ

| ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಪರದಾಟ | ತಾಲೂಕು ಕೇಂದ್ರದಲ್ಲಿ ಜಾಗವೇ ದೊರಕಿಲ್ಲ (more…)

9 hours ago