ಕವರ್ ಸ್ಟೋರಿ

ಹಳೇ ರಸ್ತೆಯಲ್ಲಿ ಹೊಸ ಹೊಂಡಗಳು – ಬಂಟ್ವಾಳ ಜಂಕ್ಷನ್ ನಲ್ಲಿ ಜಾಗ್ರತೆ!!!

SPOTLIGHT by www.bantwalnews.com

Editor: Harish Mambady

ಜಾಹೀರಾತು

Click for Video:

 

ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಟ್ವಾಳ ನಾರಾಯಣಗುರು ವೃತ್ತದಿಂದ ಮುಂದೆ ಚಾರ್ಮಾಡಿ ಕಡೆ ಸಾಗುವಾಗ ಹುಷಾರು. ಅಲ್ಲಲ್ಲಿ ಹೊಂಡಗಳಿವೆ ಎಚ್ಚರಿಕೆ.

ಈಗಾಗಲೇ ಬಂಟ್ವಾಳದಿಂದ ಪುಂಜಾಲಕಟ್ಟೆವರೆಗೆ ರಸ್ತೆ ಅಭವೃದ್ಧಿಗೆ ಅನುದಾನ ಮೀಸಲಿಟ್ಟಾಗಿದೆ. ಆದರೆ ಕಾಮಗಾರಿ ಆರಂಭಗೊಳ್ಳಲು ಮುಹೂರ್ತ ನಿಗದಿಯಾಗಿಲ್ಲ. ಈ ಮಧ್ಯೆ ಬಂಟ್ವಾಳ ಪೇಟೆ, ಬೆಳ್ತಂಗಡಿ, ಬಿ.ಸಿ.ರೋಡ್, ಮೂಡುಬಿದಿರೆ ಕಡೆಗಳಿಗೆ ವಾಹನಗಳು ತಿರುಗುವ ಜಂಕ್ಷನ್ ಆಗಿರುವ ತುಂಬ್ಯ ಜಂಕ್ಷನ್ ಅತ್ಯಂತ ಅಪಾಯದ ಸ್ಥಿತಿಯಲ್ಲಿದೆ. ಇಲ್ಲಿ ವಾಹನಗಳು ಸಂಚರಿಸುವಾಗ ಹೊಂಡ ತಪ್ಪಿಸಲು ಹೊರಟರೆ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯಬೇಕು. ವಾಹನದಟ್ಟಣೆ ಹೆಚ್ಚಾದರೂ ರಸ್ತೆ ಅಗಲಗೊಳ್ಳದೇ ಇರುವುದು, ಇರುವ ರಸ್ತೆ ಹೊಂಡಮಯವಾಗಿರುವ ಕಾರಣ ವಾಹನ ಸಂಚಾರಕ್ಕೆ ಈ ಭಾಗದಲ್ಲಿ ತೀವ್ರ ತೊಡಕುಂಟಾಗುತ್ತಿದೆ.

ಏನು ಸಮಸ್ಯೆ:

ಈ ಭಾಗದಲ್ಲಿ ರಸ್ತೆ ಹೊಂಡದ ಸಮಸ್ಯೆಯಷ್ಟೇ ಅಲ್ಲ, ಬಸ್ ಗಳು ರಸ್ತೆಯಲ್ಲೇ ಪಾರ್ಕಿಂಗ್ ಮಾಡುವ ಕಾರಣ ಟ್ರಾಫಿಕ್ ಜಾಮ್ ಗೂ ಕಾರಣವಾಗುತ್ತಿದೆ. ಹೊಂಡಮುಕ್ತ ಮತ್ತು ಅಗಲವಾದ ರಸ್ತೆ ನಿರ್ಮಾಣ ಮತ್ತು ಸುಗಮ ಟ್ರಾಫಿಕ್ ಸಂಚಾರಕ್ಕೆ ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ. ಪಕ್ಕದಲ್ಲೇ ಬಸ್ ತಂಗುದಾಣವಿದ್ದರೂ ಅಲ್ಲಿ ಬಸ್ಸುಗಳು ನಿಲ್ಲುವುದಿಲ್ಲ ಎಂಬುದು ಸಾರ್ವಜನಿಕರ ದೂರಾದರೆ, ತಂಗುದಾಣದ ಪಕ್ಕ ನಿಲ್ಲುವ ವ್ಯವಸ್ಥೆ ಇಲ್ಲ, ಅಲ್ಲಿ ಹೊಂಡಗಳಿವೆ ಎಂಬುದು ಬಸ್ ನವರ ಸಮಸ್ಯೆ. ಈ ಮಧ್ಯೆ ಗಜಗಾತ್ರದ  ಹೊಂಡಗಳು ಸಮಸ್ಯೆಗೆ ಮತ್ತಷ್ಟು ತುಪ್ಪ ಎರೆಯುತ್ತಿವೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

20 hours ago