ಆಯುಷ್ ವೈದ್ಯರ ಸಂಘಟನೆ, ಎಎಫ್ಐ, ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಕುಟುಂಬ ಸ್ನೇಹಮಿಲನ ಮತ್ತು ಸನ್ಮಾನ ಕಾರ್ಯಕ್ರಮ ಬಿ.ಸಿ.ರೋಡಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಈ ಸಂದರ್ಭ ಆಯುರ್ವೇದ ಮತ್ತು ಕೃಷಿ ವಿಜ್ಞಾನಿ ಬದನಾಜೆ ಶಂಕರ ಭಟ್ ಪೂಗವನ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಹಿರಿಯ ವೈದ್ಯ ಡಾ. ಶಾಮ ಭಟ್ ಮತ್ತು ಡಾ. ಎಂ.ಎಸ್.ಭಟ್ ಡಾ. ಶಿವಪ್ರಸಾದ ಶೆಟ್ಟಿ ಸನ್ಮಾನ ಕಾರ್ಯ ನೆರವೇರಿಸಿದರು. ಡಾ. ಪದ್ಮರಾಜ ಕೆ. ಸನ್ಮಾನಪತ್ರ ವಾಚಿಸಿದರು. ಎಎಫ್ ಐ ಬಂಟ್ವಾಳ ಅಧ್ಯಕ್ಷ ಡಾ. ಮೊಹಮ್ಮದ್ ಮುಬಶಿರ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಬಾಲಕೃಷ್ಣ ವಂದಿಸಿದರು. ಡಾ. ಸುಬ್ರಹ್ಮಣ್ಯ ಟಿ. ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಆಯುಷ್ ವೈದ್ಯರ ಕುಟುಂಬ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…