ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿರುವ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಅ.9ರಿಂದ ಸಮಗ್ರ ಶ್ರೀಚಕ್ರ ಪೂಜೆಗಳು ವಿಶೇಷವಾಗಿ ನಡೆಯುತ್ತಿದ್ದು, 18ರವರೆಗೆ ಇರಲಿವೆ.
ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳು ಹಾಗೂ ಶ್ರೀವಿದ್ಯಾ ಉಪಾಸಕ ವೇ| ಮೂ| ಪರಕ್ಕಜೆ ಗಣೇಶ ಭಟ್ಟರ ನೇತೃತ್ವದಲ್ಲಿ ಪ್ರತಿದಿನ ಸಮಗ್ರ ಶ್ರೀಚಕ್ರ ಪೂಜೆಯು ನಡೆಯುತ್ತಿದೆ. ಪ್ರತಿದಿನ ಬೆಳಗ್ಗೆ ಗಂಟೆ 8 ಕ್ಕೆ ಶ್ರೀಚಕ್ರಪೂಜೆಯು ಪ್ರಾರಂಭಗೊಂಡು ಮಹಾಮಂಗಳಾರತಿ, ಸುವಾಸಿನಿ ಪೂಜೆ, ರಾತ್ರಿ ಭಜನೆ ಹಾಗೂ ನವರಾತ್ರಿ ವಿಶೇಷ ಪೂಜೆ ನಡೆಯುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ಇರುತ್ತದೆ. 17ರಂದು ಸಂಜೆ ಷೋಡಷ ಲಕ್ಷ್ಮೀ ಪೂಜೆ ಹಾಗೂ ವಿಜಯದಶಮಿಯಂದು ವೇದಮೂರ್ತಿ ಪರಕ್ಕಜೆ ಗಣಪತಿ ಭಟ್ಟರ ನೇತೃತ್ವದಲ್ಲಿ ನವಚಂಡಿಕಾ ಯಾಗ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಸೇರಾಜೆ ಸತ್ಯನಾರಾಯಣ ಭಟ್ ತಿಳಿಸಿದ್ದಾರೆ.