ಅ.28ರಂದು ನಡೆಯಲಿರುವ ತಾಲೂಕು ಪಂಚಾಯತ್ ಬಂಟ್ವಾಳದ ಸಂಗಬೆಟ್ಟು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪ್ರಭಾಕರ ಪ್ರಭು ನಾಮಪತ್ರ ಸಲ್ಲಿಸಿದರು. ಪಕ್ಷ ಪ್ರಮುಖರಾದ ಸುಲೋಚನ ಜಿ.ಕೆ ಭಟ್ , ಜಿಪಂ ಸದಸ್ಯ ತುಂಗಪ್ಪ ಬಂಗೇರ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ಸತೀಶ್ ಪೂಜಾರಿ, ಜಿ.ಆನಂದ, ಮೋನಪ್ಪ ದೇವಸ್ಯ, ರತ್ನಾಕರ ಚೌಟ, ರಾಮ್ ದಾಸ ಬಂಟ್ವಾಳ, ಆನಂದ ಶಂಭೂರು, ರಂಜಿತ್ ಮೈರ, ಪ್ರಮೋದ್ ಅಜ್ಜಿ ಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.