ಕೆ.ಎಮ್.ಸಿ. ಆಸ್ಪತ್ರೆ, ಮಂಗಳೂರು ಸಹಯೋಗದೊಂದಿಗೆ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಮಾನಸಿಕ ಒತ್ತಡ ಮತ್ತು ನಿರ್ವಹಣೆ ಎಂಬ ವಿಚಾರದಲ್ಲಿ ವೈದ್ಯಕೀಯ ಸಲಹಾ ಮಾಹಿತಿಯನ್ನು ರಾಜೇಶ್ ಪಾಂಡಿ ನೀಡಿದರು.
ಬಂಟ್ವಾಳ ತಾಲೂಕು ಕಾನೂನು ಸಲಹಾ ಸಮಿತಿ-ತಾಲೂಕು ವಕೀಲರ ಸಂಘ, ರೋಟರಿ ಕ್ಲಬ್ ಬಂಟ್ವಾಳ ಹಾಗೂ ಭಾರತೀಯ ಜೈನ್ ಮಿಲನ್, ಬಂಟ್ವಾಳ ಆಶ್ರಯದಲ್ಲಿ ಜರಗಿದ ಶಿಬಿರವನ್ನು ಬಂಟ್ವಾಳದ ನ್ಯಾಯಾಧೀಶೆ ಪ್ರತಿಭಾ ಡಿ.ಎಸ್. ಉದ್ಘಾಟಿಸಿದರು.
ಜನರಿಗೆ ಆರೋಗ್ಯ ಕಾಪಾಡಿಕೊಳ್ಳುವ ಹಾಗೂ ಯಾವುದೇ ಕಾಯಿಲೆ ಬಾರದಂತೆ ಹೇಗೆ ತಡೆಗಟ್ಟಬೇಕು, ಎಂಬುದಕ್ಕಾಗಿ ಇಂತಹ ಶಿಬಿರಗಳು ಅತ್ಯವಶ್ಯಕ ಎಂದು ಅವರು ಹೇಳಿದರು.
ಶಿಬಿರದ ನೇತೃತ್ವ ವಹಿಸಿರುವ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಹಾಗೂ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಬಂಟ್ವಾಳ ಜೈನ್ ಮಿಲನ್ ಕಾರ್ಯದರ್ಶಿ ಗೀತಾ ಜಿನಚಂದ್ರ, ರೋಟರಿ ಕ್ಲಬ್ ಕಾರ್ಯದರ್ಶಿ ಹಾಗೂ ವಕೀಲರ ಸಂಘದ ಕಾರ್ಯದರ್ಶಿ ಆಶಾ ಡಿ. ರೈ ಉಪಸ್ಥಿತರಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ಬಂಟ್ವಾಳ ಶಾಖೆಯ ಅಧ್ಯಕ್ಷರಾದ ಬಿಜೇಶ್ ಜೈನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾರತೀಯ ಜೈನ್ ಮಿಲನ್ ವಲಯ 8ರ ನಿರ್ದೇಶಕ ಸುದರ್ಶನ್ ಜೈನ್ ಹಾಗೂ ರೋಟರಿ ಡಿಸ್ಟ್ರಿಕ್ ಉಪ ಗವರ್ನರ್ ಪ್ರಕಾಶ್ ಕಾರಂತ್, ನರಿಕೊಂಬು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಭಾರತೀಯ ಜೈನ್ ಮಿಲನ್ ವಲಯ 8ರ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರೆ. ನ್ಯಾಯವಾದಿ ಸುರೇಶ್ ಕುಮಾರ್ ನಾವೂರು ಸ್ವಾಗತಿಸಿದರು. ಬಂಟ್ವಾಳ ಜೈನ್ ಮಿಲನ್ ಕಾರ್ಯದರ್ಶಿ ಡಾ| ಸುದೀಪ್ ಕುಮಾರ್ ವಂದಿಸಿದರು.
200ಕ್ಕಿಂತಲೂ ಹೆಚ್ಚು ಜನರು ಆರೋಗ್ಯ ತಪಾಸಣೆಯನ್ನು ಮಾಡಿಕೊಂಡು, ಸೂಕ್ತ ಮಾರ್ಗದರ್ಶನ ಸಲಹೆ ಹಾಗೂ ಔಷಧಿಗಳನ್ನು ಪಡಕೊಂಡರು.