ಬಂಟ್ವಾಳ

ಬಂಟ್ವಾಳ ಎಪಿಎಂಸಿ ಮತ್ತೆ ಕೈವಶ: ಪದ್ಮನಾಭ ರೈ, ಚಂದ್ರಶೇಖರ ಪೂಜಾರಿ ಪುನರಾಯ್ಕೆ

ನಿರೀಕ್ಷೆಯಂತೆ ಬಂಟ್ವಾಳ ತಾಲೂಕು ಕೃಷಿಯುತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರ ಮತ್ತೆ ಕಾಂಗ್ರೆಸ್ ಪಾಲಾಗಿದೆ. ಪಾಣೆಮಂಗಳೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಕೆ.ಪದ್ಮನಾಭ ರೈ ಉಪಾಧ್ಯಕ್ಷರಾಗಿ ಕಡೇಶ್ವಾಲ್ಯ ಕ್ಷೇತ್ರದಿಂದ ಆಯ್ಕೆಯಾದ ಚಂದ್ರಶೇಖರ ಪೂಜಾರಿ ಅವಿರೋಧವಾಗಿ ಪುನರಾಯ್ಕೆಯಾದರು. ಇಬ್ಬರೂ ಕಾಂಗ್ರೆಸ್ ಬೆಂಬಲಿತರು.

ಜಾಹೀರಾತು

ಎರಡನೇ ಅವಧಿಗೆ ಸೋಮವಾರ ಬೆಳಗ್ಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದ ಸಂದರ್ಭ ಪದ್ಮನಾಭ ರೈ ಮತ್ತು ಚಂದ್ರಶೇಖರ ಪೂಜಾರಿ ಅವರಿಬ್ಬರೇ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.

ಬಂಟ್ವಾಳ ಎಪಿಎಂಸಿಯ ಸದಸ್ಯರಿವರು.

  • ಸಂಗಬೆಟ್ಟು ಪದ್ಮರಾಜ ಬಲ್ಲಾಳ ಮಾವಂತೂರು (ಕಾಂಗ್ರೆಸ್ ಬೆಂಬಲಿತರು)
  • ಚನ್ನೈತೋಡಿ , ಭಾರತಿ ಎಸ್. ರೈ ಪಡಂತರಕೋಡಿ (ಕಾಂಗ್ರೆಸ್ ಬೆಂಬಲಿತರು)
  • ಅಮ್ಟಾಡಿ  ದಿವಾಕರ ಪಂಬದಬೆಟ್ಟು (ಕಾಂಗ್ರೆಸ್ ಬೆಂಬಲಿತರು)
  • ಕಾವಳಮೂಡೂರು  ಅಭ್ಯರ್ಥಿಗಳು: ಹರಿಶ್ಚಂದ್ರ ಪೂಜಾರಿ ಕಜೆಕಾರು. (ಬಿಜೆಪಿ ಬೆಂಬಲಿತ)
  • ಕೊಳ್ನಾಡು  ಬಿ.ಚಂದ್ರಶೇಖರ ರೈ, (ಕಾಂಗ್ರೆಸ್ ಬೆಂಬಲಿತರು)
  • ಅಳಕೆ ಗೀತಾಲತಾ ಟಿ.ಶೆಟ್ಟಿ, (ಬಿಜೆಪಿ ಬೆಂಬಲಿತ)
  • ಕೆದಿಲ ಜಗದೀಶ ಡಿ, (ಬಿಜೆಪಿ ಬೆಂಬಲಿತ)
  • ಮಾಣಿ ಬಿ.ನೇಮಿರಾಜ ರೈ, (ಬಿಜೆಪಿ ಬೆಂಬಲಿತ)
  • ಕಡೇಶ್ವಾಲ್ಯ ಚಂದ್ರಶೇಖರ ಪೂಜಾರಿ (ಕಾಂಗ್ರೆಸ್ ಬೆಂಬಲಿತರು)
  • ಪಾಣೆಮಂಗಳೂರು , ಕೆ. ಪದ್ಮನಾಭ ರೈ. (ಕಾಂಗ್ರೆಸ್ ಬೆಂಬಲಿತರು)
  • ತುಂಬೆ  ವಿಠಲ ಸಾಲ್ಯಾನ್. (ಬಿಜೆಪಿ ಬೆಂಬಲಿತ)
  • ವರ್ತಕರ ಕ್ಷೇತ್ರ –  ಬಾಲಕೃಷ್ಣ ಆಳ್ವ. (ಬಿಜೆಪಿ ಬೆಂಬಲಿತ)
  • ಸಹಕಾರಿ ಕ್ಷೇತ್ರಕ್ಕೆ – ರವೀಂದ್ರ ಕಂಬಳಿ (ಬಿಜೆಪಿ ಬೆಂಬಲಿತ)
  • ನಾಮನಿರ್ದೇಶಿತ –  ಹರೀಶ್ ಕೊಟ್ಟಾರಿ
  • ನಾಮನಿರ್ದೇಶಿತ –  ಕಾಂಚಲಾಕ್ಷಿ
  • ನಾಮನಿರ್ದೇಶಿತ –  ಆಲ್ಫೋನ್ಸ್ ಮಿನೇಜಸ್

ಎಪಿಎಂಸಿಯಲ್ಲಿ ಒಟ್ಟು 13 ಚುನಾಯಿತ ಹಾಗೂ ಮೂವರು ನಾಮನಿರ್ದೇಶಿತ ಸದಸ್ಯರಿದ್ದು, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವೇಳೆ ನಾಮನಿರ್ದೇಶಿತ ಸದಸ್ಯರ ಮತ ಗಣನೆಗೆ ಬರುತ್ತದೆ. ಈ ಬಾರಿ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ. 13 ಸದಸ್ಯರ ಪೈಕಿ ಬಿಜೆಪಿ 7 ಮತ್ತು ಕಾಂಗ್ರೆಸ್ 6 ಬೆಂಬಲಿತರನ್ನು ಹೊಂದಿದೆ. ಆದರೆ ಮೂವರು ನಾಮನಿರ್ದೇಶಿತರಾಗಿ ಹರೀಶ್ ಕೊಟ್ಟಾರಿ, ಕಾಂಚಲಾಕ್ಷಿ ಮತ್ತು ಆಲ್ಫೋನ್ಸ್ ಮಿನೇಜಸ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಇವರು ಮೂವರೂ ಕಾಂಗ್ರೆಸ್, ಜೆಡಿಎಸ್ ಬೆಂಬಲಿಗರಾದ ಕಾರಣ ಸಹಜವಾಗಿಯೇ ಅಧ್ಯಕ್ಷ, ಉಪಾಧ್ಯಕ್ಷರು ಅದೇ ಪಕ್ಷಕ್ಕೆ ಸೇರಿದವರು ಆಗುತ್ತಾರೆ ಎಂದು ಖಚಿತವಾಗಿತ್ತು.

ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ ಅವರು ಚುನಾವಣಾ ಪ್ರಕ್ರಿಯೆ ನಡೆಸಿದರು. ಎ.ಪಿ.ಎಂ.ಸಿ ಕಾರ್ಯದರ್ಶಿ ಭಾರತಿ , ಪ್ರಭಾರ ಉಪತಹಶೀಲ್ದಾರ ಸೀತರಾಮ, ಚುನಾವಣಾ ಶಾಖಾ ಸಿಬ್ಬಂದಿ ರಾಜ್ ಕುಮಾರ್ ಸಹಕರಿಸಿದರು.

ಅಭಿನಂದನೆ:

ನೂತನವಾಗಿ ಆಯ್ಕೆಯಾದ ಕೆ.ಪದ್ಮನಾಭ ರೈ ಮತ್ತು ಚಂದ್ರಶೇಖರ ಪೂಜಾರಿ ಅವರನ್ನು ಮಾಜಿ ಸಚಿವ ಬಿ.ರಮಾನಾಥ ರೈ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪಕ್ಷ ಪ್ರಮುಖರಾದ ಮೊಹಮ್ಮದ್ ನಂದಾವರ ಸಹಿತ ಪ್ರಮುಖರು ಅಭಿನಂದನೆ ಸಲ್ಲಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts