ಬಂಟ್ವಾಳ

ಅಂಚನ್ ಸಂಭ್ರಮೋತ್ಸವಕ್ಕೆ ಚಾಲನೆ

ಜವಳಿ ಉದ್ಯಮದಲ್ಲಿ ಯಶಸ್ವಿ ಎರಡು ದಶಕಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಬಂಟ್ವಾಳದ ಹೆಸರಾಂತ ವಸ್ತ್ರ ಮಳಿಗೆ ಅಂಚನ್ ಗಾರ್ಮೆಂಟ್ಸ್ ಈ ಸವಿನೆನಪಿಗಾಗಿ ಅಂಚನ್ ಸಂಭ್ರಮೋತ್ಸವಕ್ಕೆ ಸೋಮವಾರ ಚಾಲನೆ ನೀಡಿದೆ.

ಜಾಹೀರಾತು

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ದೀಪ ಪ್ರಜ್ವಲಿಸಿ ಅಂಚನ್ ಸಂಭ್ರಮೋತ್ಸವಕ್ಕೆ ಚಾಲನೆ ನೀಡಿದರು.  ಈ ಸಂದರ್ಭ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್, ಅಂಚನ್ ಗಾಮೆಂಟ್ಸ್‌ನ ಮಾಲಕ ಪ್ರಕಾಶ್ ಅಂಚನ್  ಅವರ ಮಾತಪಿತರಾದ ಕೊರಗಪ್ಪ ಪೂಜಾರಿ ಹಾಗೂ ವಸಂತಿ ಕೆ. ಪೂಜಾರಿ,  ಸಹೋದರರಾದ ಪುರೋಷೋತ್ತಮ ಅಂಚನ್, ಶೇಖರ್ ಅಂಚನ್, ಬಂಟ್ವಾಳ ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಸಂಜೀವ ಪೂಜಾರಿ ಮತ್ತಿತರರು ಹಾಜರಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ,  ಬಿಜೆಪಿ ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್ ಮತ್ತಿತರರು ಜವಳಿ ಮಳಿಗೆಗೆ  ಭೇಟಿ ನೀಡಿ ಶುಭ ಹಾರೈಸಿದರು. ಅಕ್ಟೋಬರ್ 15ರಿಂದ ನವೆಂಬರ್ 10ರವರೆಗೆ ಅಂಚನ್ ಗಾರ್ಮೆಂಟ್ಸ್‌ನಲ್ಲಿ ಅಂಚನ್ ಸಂಭ್ರಮೋತ್ಸವದ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ನಡೆಯಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ಮಾಲಕ ಪ್ರಕಾಶ್ ಅಂಚನ್ ವಿನಂತಿಸಿಕೊಂಡಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts