ಶನಿವಾರ ರಾತ್ರಿ ಸುಮಾರು 8.30ಕ್ಕೆ ಸುರಿದ ಭಾರಿ ಮಳೆ ಹಾಗೂ ಸಿಡಿಲಿಗೆ ಪಾಣೆಮಂಗಳೂರು ಹೋಬಳಿಯ ಪಜೀರು ಗ್ರಾಮಾದ ಸಂಬಾರತೋಟ ಎಂಬಲ್ಲಿ ನಿವಾಸಿ ಖೈರುನ್ನೀಸ ಎಂಬವರ ವಾಸದ ಮನೆಗೆ ಹಾನಿಯಾಗಿದೆ.
ಸಿಡಿಲು ಬಡಿದ ಪರಿಣಾಮ, ಮನೆಯ ವಿದ್ಯುತ್ ವ್ಯವಸ್ಥೆ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಮನೆಯ ಹಲವು ಭಾಗಗಳಲ್ಲಿ ಬಿರುಕು ಕಾಣಿಸಿಕೊಂಡಿರುತ್ತದೆ. ಯಾರಿಗೂ ಅಪಾಯ ಆಗಿರುವುದಿಲ್ಲ. ಘಟನಾ ಸ್ಥಳಕ್ಕೆ ಪಾಣೆಮಂಗಳೂರು ಹೋಬಳಿಯ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಸಿಬ್ಬಂದಿ ಜನಾರ್ದನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…