ಸಾಮಾನ್ಯವಾಗಿ ರಸ್ತೆಯಲ್ಲಿ ಹೊಂಡಗಳಿದ್ದರೆ, ಅಥವಾ ಪರಿಸರದಲ್ಲಿ ಕಸದ ರಾಶಿ ಇದ್ದರೆ ನಾವು ಏನು ಮಾಡಬೇಕು? ಜವಾಬ್ದಾರಿಯುತ ನಾಗರಿಕರಾಗಿ ನಾವು ಸ್ಥಳೀಯ ಸಂಸ್ಥೆಯನ್ನು ಸಂಪರ್ಕಿಸಿ ಅವರಿಗೆ ಇಂಥ ಸಮಸ್ಯೆ ಕುರಿತು ಗಮನ ಹರಿಸಬೇಕು. ಕೆಲವೊಮ್ಮೆ ಆಡಳಿತ ಯಂತ್ರ ಕೆಲಸ ನಿರ್ವಹಿಸಲು ತಡ ಮಾಡಿದಾಗ ಸ್ಥಳೀಯರೇ ಮುಂದಾಗುವುದೂ ಉಂಟು.
ಬಂಟ್ವಾಳ ಎಸ್.ವಿ.ಎಸ್. ಕಾಲೇಜು ವಿದ್ಯಾರ್ಥಿಗಳು ಅದನ್ನೇ ಬುಧವಾರ ಮಾಡಿದರು. ತಮ್ಮ ಕಾಲೇಜಿನ ಎದುರು ಸಾಗುವ ಬಂಟ್ವಾಳ – ಮೂಡುಬಿದಿರೆ ಸಂಪರ್ಕ ರಸ್ತೆ ಹದಗೆಟ್ಟಿದ್ದು, ರಸ್ತೆಯಲ್ಲಿ ಹೊಂಡಗಳಿದ್ದುದನ್ನು ಗಮನಿಸಿದ ವಿದ್ಯಾರ್ಥಿಗಳು ತಾವೇ ದುರಸ್ತಿಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.