ಬಂಟ್ವಾಳ ಮಾರ್ಕೆಟ್ ರಸ್ತೆಯಲ್ಲಿರುವ ತಾಲೂಕಿನ ಹೆಸರಾಂತ ಜವಳಿ ಮಳಿಗೆ ಅಂಚನ್ಸ್ ಗಾರ್ಮೆಂಟ್ಸ್ ಯಶಸ್ವಿ 20 ವರ್ಷಗಳನ್ನು ಪೂರೈಸುತ್ತಿರುವ ಶುಭ ಸಂದರ್ಭದಲ್ಲಿ ತನ್ನೆಲ್ಲಾ ಗ್ರಾಹಕರಿಗಾಗಿ ವಿಶೇಷ ಬಹುಮಾನ ಹಾಗೂ ದರ ಕಡಿತ ಮಾರಾಟದ ಅಂಚನ್ ಸಂಭ್ರಮೋತ್ಸವವನ್ನು ಅ.15ರಿಂದ ನ.20ರವರೆಗೆ ಆಯೋಜಿಸಿದೆ.
ಅ.15ರಂದು ಸೋಮಾವಾರ ಬೆಳಿಗ್ಗೆ 9 ಗಂಟೆಗೆ ಅಂಚನ್ ಸಂಭ್ರಮೋತ್ಸವ ಆರಂಭಗೊಳ್ಳಲಿದ್ದು ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ ನೀಡುವರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಅಂಚನ್ ಸಂಭ್ರಮೋತ್ಸವದ ಸಂದರ್ಭದಲ್ಲಿ ಪ್ರತಿ ಸಾವಿರ ರುಪಾಯಿ ಮೇಲ್ಪಟ್ಟು ಬಟ್ಟೆ ಖರೀದಿಯ ಮೇಲೆ 1 ಅದೃಷ್ಟ ಕೂಪನ್ ಪಡೆಯುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಲಾಗಿದ್ದು ಈ ಸುವರ್ಣ ಅವಕಾಶವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಅಂಚನ್ ಗಾರ್ಮೆಂಟ್ಸ್‌ದ ಆಡಳಿತ ಪಾಲುದಾರ ಪ್ರಕಾಶ್ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…