ಬಿಜೆಪಿ ಯುವಮೋರ್ಚಾ ಬಂಟ್ವಾಳದ ವತಿಯಿಂದ ಬೆಳ್ತಂಗಡಿ ಶಾಸಕರು ಬಿಜೆಪಿ ಯುವಮೋರ್ಚಾದ ಜಿಲ್ಲಾದ್ಯಕ್ಷರಾದ ಹರೀಶ್ ಪೂಂಜ ರವರನ್ನು ಬೆಳ್ತಂಗಡಿ ಶಾಸಕರ ಕಚೇರಿ ಶ್ರಮಿಕ ದಲ್ಲಿ ಯುವಮೋರ್ಚಾ ಅದ್ಯಕ್ಷ ವಜ್ರನಾಥ ಕಲ್ಲಡ್ಕ ರವರ ನೇತೃತ್ವದಲ್ಲಿ ಭೇಟಿ ಮಾಡಿ ಬೆಳ್ಳಿಯ ಬಾವಚಿತ್ರ ನೀಡಿ ಅಭಿನಂದಿಸಲಾಯಿತು.
ಬಂಟ್ವಾಳ ಯುವಮೋರ್ಚಾದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಈ ಅಭಿನಂದನೆ ಯುವಮೋರ್ಚಾದ ಸರ್ವಸದಸ್ಯರಿಗು ಅರ್ಪಣೆ ಎಂದರಲ್ಲದೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿಯವರ ನೇತೃತ್ವದ ಸರಕಾರ ರಚನೆಗಾಗಿ ಶಕ್ತಿಮೀರಿ ದುಡಿಯುವಂತೆ ಕಿವಿಮಾತು ಹೇಳಿದರು
ಸ್ಥಳದಲ್ಲಿ ಕ್ಷೇತ್ರ ಕಾರ್ಯದರ್ಶಿ ರಂಜಿತ್ ಮೈರ, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುದರ್ಶನ್ ಬಜ, ಉಪಾದ್ಯಕ್ಷರಾದ ವಿನೀತ್ ಶೆಟ್ಟಿ, ಕಾರ್ಯದರ್ಶಿಗಳಾದ ಲೋಹಿತ್ ಅಗರಿ, ದಿನೇಶ್ ದಂಬೆದಾರ್ ಸುರೇಶ್ ಕೋಟ್ಯಾನ್, ಕೋಶಾದಿಕಾರಿ ರೂಪೇಶ್ ಆಚಾರ್ಯ, ಸದಸ್ಯರಾದ ಕಾರ್ತಿಕ್ ಬಲ್ಲಾಲ್, ನಾರಾಯಣ ಪೂಜಾರಿ, ಯತಿನ್ ಕುಮಾರ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…