ಗುರುವಾರ ಸಂಜೆ ಬಂಟ್ವಾಳ ಪರಿಸರದಲ್ಲಿ ಸುರಿದ ಮಳೆಯೊಂದಿಗೆ ಬಡಿದ ಸಿಡಿಲು, ಗುಡುಗಿನ ಶಬ್ದಕ್ಕೆ ಶಾಕ್ ಆಗಿ ನಾವೂರು ಮತ್ತು ದೇವಸ್ಯ ಪಡೂರು ಗ್ರಾಮದ ಒಟ್ಟು ನಾಲ್ವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದರು.
ನಾವೂರು ಪಟ್ಲ ಗ್ರಾಮದ ಅನ್ನತ್ ಬಾನು, ಸಾಹಿರಾ ಕಾಲೇಜಿನಿಂದ ಮರಳುವ ಸಂದರ್ಭ ಸಿಡಿಲಿನ ಅಬ್ಬರಕ್ಕೆ ಶಾಕ್ ಆಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ದೇವಸ್ಯಪಡೂರು ಗ್ರಾಮದ ಐಸಮ್ಮ ಮತ್ತು ಆಸ್ಯಮ್ಮ ಮನೆಯಲ್ಲಿದ್ದಾಗ ಸಿಡಿಲಬ್ಬರಕ್ಕೆ ಶಾಕ್ ಆಗಿದ್ದು, ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಗ್ರಾಮ ಕರಣಿಕರಾದ ಕುಮಾರ್ ಟಿ.ಸಿ, ಸುರೇಶ್ ಮತ್ತು ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಮೊನೀಶ್ ಆಲಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…