ಸಾಂದರ್ಭಿಕ ಚಿತ್ರ
www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಿ.ಸಿ.ರೋಡ್ ಸೇರಿದಂತೆ ಬಂಟ್ವಾಳ ಪರಿಸರದಲ್ಲಿ ಗುಡುಗು, ಸಿಡಿಲಿನೊಂದಿಗೆ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
ಭಾರಿ ಮಳೆಗೆ ಸಂಜೆಯ ವೇಳೆಗೆ ಬಿ.ಸಿ.ರೋಡಿನಲ್ಲಿ ಬಸ್ಸುಗಳು ದೀಪ ಬೆಳಗಿಸಿ ಸಂಚರಿಸಿದವು. ಚಿತ್ರ: ಪದ್ಮನಾಭ ರಾವ್, ಪಲ್ಲವಿ ಸ್ಟುಡಿಯೋ, ಬಿ.ಸಿ.ರೋಡ್
ಭಾರಿ ಸಿಡಿಲಿಗೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿರುವ ಕೊಠಡಿ ಸಂಖ್ಯೆ 5ರಲ್ಲಿರುವ ಬ್ಯಾಟರಿ ಸ್ಫೋಟಗೊಂಡಿದ್ದು, ಈ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು, ಸಿಬ್ಬಂದಿ ಗಾಬರಿಯಾದರು. ಆದರೆ ಅದೃಷ್ಟವಶಾತ್ ಯಾರಿಗೂ ಗಾಯ ಸಂಭವಿಸಿಲ್ಲ. ಮಳೆಯಿಂದ ಮಿನಿ ವಿಧಾನಸೌಧದ ಕೆಲವೆಡೆ ಗೋಡೆಯಲ್ಲಿ ನೀರು ಜಿನುಗುತ್ತಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರು ನೀಡಿದ್ದಾರೆ.
ತಾಲೂಕು ಕಚೇರಿಯಲ್ಲಿ ಬ್ಯಾಟರಿ ಸ್ಫೋಟಗೊಂಡಿತು.
ಬುಧವಾರ ಮಧ್ಯಾಹ್ನದ ಬಳಿಕವೂ ಇದೇ ರೀತಿ ಮಳೆ ಸುರಿದಿದ್ದು, ಗುರುವಾರ ಈ ಪರಿಸ್ಥಿತಿ ಮುಂದುವರಿದಿದೆ. ಇದೇ ವೇಳೆ ತಾಲೂಕಿನ ಹಲವೆಡೆ ಸಿಡಿಲು, ಗುಡುಗಿನಿಂದಾಗಿ ಕೆಲವೆಡೆ ಹಾನಿ ಉಂಟಾಗಿದೆ. ಬುಧವಾರ ಸಂಜೆ ಸುರಿದ ಮಳೆ, ಗಾಳಿಗೆ ಸೊತ್ತುಗಳು ನಷ್ಟವಾಗಿವೆ. ಪೆರಾಜೆ ಗ್ರಾಮದ ಮನೆಯೊಂದಕ್ಕೆ ಗೆಲ್ಲು ಬಿದ್ದು ಛಾವಣಿ ಜಖಂ ಆಗಿದ್ದು, ಕುಳ ಗ್ರಾಮದ ಮನೆ, ಕೊಟ್ಟಿಗೆ ಕುಸಿದು ಹಾನಿಯಾಗಿದೆ. ತುಂಬೆ ಸರಕಾರಿ ಹಿ.ಪ್ರ.ಶಾಲೆಯ ಶೀಟ್ ಹಾರಿ ಹೋಗಿದೆ. ಗುರುವಾರದ ಸಿಡಿಲಿಗೂ ಹಲವೆಡೆ ವಿದ್ಯುತ್ ವಯರಿಂಗ್ ಗಳು ಸುಟ್ಟು ಹೋಗಿರುವ ಬಗ್ಗೆ ಮಾಹಿತಿಗಳು ಲಭಿಸಿವೆ. ಆದರೆ ರಾತ್ರಿಯವರೆಗೆ ಯಾವುದೇ ಜೀವಹಾನಿ ಸಂಭವಿಸಿದ ಬಗ್ಗೆ ತತಕ್ಷಣದ ವರದಿಗಳು ತಾಲೂಕು ಕಚೇರಿಗೆ ಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…