ವಿಧಾನಪರಿಷತ್ ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಅನುದಾನದಲ್ಲಿ ಸಜಿಪಮೂಡ ಗ್ರಾಮದ ಕಂದೂರಿನಲ್ಲಿ ಹಾಕಲಾದ ಹೈಮಾಸ್ಕ್ ದೀಪವನ್ನು ಬುಧವಾರ ಸಂಜೆ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿಯವರು ಲೋಕಾರ್ಪಣೆಗೈದರು.
ಬಳಿಕ ಸ್ಥಳೀಯ ಯುವಕ ಸಂಘದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿ. ಶರತ್ ಮಡಿವಾಳರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶರತ್ ನೆನಪಿಗಾಗಿ ನನ್ನ ಅನುದಾನದಲ್ಲಿ ಹೈಮಾಸ್ಕ್ ದೀಪ ಅಳವಡಿಕೆಗೆ ನಿರ್ಧರಿಸಿದ್ದೆ ಆ ಮೂಲಕ ಕತ್ತಲಲ್ಲಿರುವ ಈ ಭಾಗದಲ್ಲಿ ಹೊಸ ಬೆಳಕನ್ನು ಮೂಡಿಸುವ ಪ್ರಯತ್ನವಾಗಿ ಈ ದಿನ ಹೈಮಾಸ್ಕ್ ದೀಪವನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಸಜಿಪಮುನ್ನೂರು ಮತ್ತು ಸಜಿಪಮೂಡ ಗ್ರಾಮದ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಭರವಸೆಯಿತ್ರರು.
ಬಿಜೆಪಿ ಬಂಟ್ವಾಳ ಕ್ಷೇತ್ರ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ,ಬಂಟ್ವಾಳ ತಾಲೂಕು ಪಂಚಾಯಿತ್ ನ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಸಜಿಪಮೂಡ ಗ್ರಾಮ ಪಂಚಾಯಿತ್ ನ ಅಧ್ಯಕ್ಷ ವಿಶ್ವನಾಥ ಬೆಳ್ಚಡ , ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಸಜಿಪಮೂಡ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ, ಹಿರಿಯರಾದ ತನಿಯಪ್ಪ ಮಡಿವಾಳ, ಮೋಹನ್ ಪಿ.ಎಸ್, ಶ್ರೀನಾಥ್ ಶೆಟ್ಟಿ, ಸೀತಾರಾಮ ಅಗಳಿಬೆಟ್ಟು, ನವೀನ್ ಅಂಚನ್, ಸುಮತಿ ಗಿರಿಜಾ ನಾಯಕ್, ವೀರೇಂದ್ರ ಕುಲಾಲ್, ಎನ್ ಕೆ ಶಿವ,ಇದಿನಬ್ಬ ನಂದಾವರ, ಪ್ರವೀಣ ಗಟ್ಟಿ, ರೂಪೇಶ್ ಆಚಾರ್ಯ, ನರಿಕೊಂಬು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಬಿಜೆಪಿ ಕ್ಷೇತ್ರ ಕಾರ್ಯದರ್ಶಿ ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಸುರೇಶ್ ಶೆಟ್ಟಿ ಕೋಯ ಮಜಲು, ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ದಯಾನಂದ ಬಿ.ಎಂ, ಪ್ರಮೀಳಾ ಗಣೇಶ್, ಯಶವಂತ ನಗ್ರಿ ,ಸುರೇಶ್ ಕೋಟ್ಯಾನ್ ನರಿಕೊಂಬು ,ಮನೋಜ್ ತುಂಬೆ,ಬಾಲಕೃಷ್ಣ ಸೆರ್ಕಳ ಉಪಸ್ಥಿತರಿದ್ದರು.