ಸರಿದಂತರ ಪ್ರಕಾಶನ ವತಿಯಿಂದ ಮೊಡಂಕಾಪು ಪರಿಸರದಲ್ಲಿ ಪ್ಲಾಸ್ಟಿಕ್ ಜಾಗೃತಿ ಸಾರುವ ಫಲಕಗಳನ್ನು ಮನೆ ಮನೆಗಳಿಗೆ ವಿತರಿಸುವ ಕಾರ್ಯಕ್ಕೆ ಮಂಗಳವಾರ ಗಾಂಧೀ ಜಯಂತಿಯಂದು ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಮನೆಯಿಂದ ಚಾಲನೆ ನೀಡಲಾಯಿತು.
ಕಳೆದ ಹತ್ತಾರು ವರ್ಷಗಳಿಂದ ಪ್ಲಾಸ್ಟಿಕ್ ಕುರಿತ ಜಾಗೃತಿ ಮೂಡಿಸುತ್ತಿರುವ ಪ್ರೊ. ರಾಜಮಣಿ ರಾಮಕುಂಜ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಪ್ಲಾಸ್ಟಿಕ್ ಮುಕ್ತ ಅಭಿಯಾನದ ಅಂಗವಾಗಿ ಮನೆ ಮನೆಗಳಿಗೆ ಪ್ಲಾಸ್ಟಿಕ್ ಬಳಸದೇ ಪರಿಸರ ಉಳಿಸಿ ಎಂಬ ಸ್ಲೋಗನ್ ಹೊಂದಿದ ಬೋರ್ಡುಗಳನ್ನು ಸ್ಥಳೀಯ ಪುರಸಭೆ ಸದಸ್ಯ ಲೋಲಾಕ್ಷ ಶೆಟ್ಟಿ, ಕಸಾಪ ಅಧ್ಯಕ್ಷ ಕೆ.ಮೋಹನ ರಾವ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಮನೆಗಳಿಗೆ ಅಳವಡಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಪ್ಲಾಸ್ಟಿಕ್ ಅನ್ನು ಬಳಸದೇ ಪರಿಸರವನ್ನು ಉಳಿಸುವ ಪ್ರತಿಜ್ಞೆ ಕೈಗೊಳ್ಳಲಾಯಿತು. ಸ್ಥಳೀಯ ಪ್ರಮುಖರಾದ ದಯಾನಂದ ಪೂಜಾರಿ, ಪ್ರಭಾಕರ ಶೆಟ್ಟಿ, ದಯಾನಂದ ಮೊಡಂಕಾಪು, ನಾಗೇಶ್ ರಾವ್, ಜೋಸ್ಫಿನ್ ಡಿಸೋಜ, ವಿನೋದ್ ಕುಮಾರ್, ಬಾಲಕೃಷ್ಣ ಶೆಟ್ಟಿ, ನಿಶಾಂತ್ ಶೆಟ್ಟಿ, ರೋಹಿತ್ ಶೆಟ್ಟಿ, ಹರೀಶ್, ಸುರೇಶ್ ಸಂಜಿತ್ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.