ಪುರಸಭೆ, ಜೇಸಿಐ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಹಾಗೂ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಳೆದ ವಾರನಡೆದ ಸ್ವಚ್ಛತಾ ಕಾರ್ಯಕ್ರಮದ ಬಳಿಕ ನವೀಕೃತಗೊಂಡ ಬಂಟ್ವಾಳ ಬಡ್ಡಕಟ್ಟೆಯ ಪ್ರಯಾಣಿಕರ ತಂಗುದಾಣವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಂಗಳವಾರ ಪ್ರಯಾಣಿಕರ ಉಪಯೋಗಕ್ಕೆ ಮುಕ್ತಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ನವೀಕೃತ ಬಸ್ ತಂಗುದಾಣ ಬಳಿಕ ಮಾತನಾಡಿದ ಅವರು ಸ್ವಚ್ಛ ಭಾರತ ಯೋಜನೆಯನ್ನು ಪ್ರಧಾನ ಮಂತ್ರಿಯವರು ಘೋಷಿಸಿದ್ದರೂ ಪ್ರಧಾನಿ ಅಥವಾ ಜನಪ್ರತಿನಿಧಿಗಳಿಂದ ಮಾತ್ರ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸಂಘ ಸಂಸ್ಥೆಗಳು ಹಾಗೂ ಪ್ರತಿಯೊಬ್ಬ ಜನರೂ ಇದರಲ್ಲಿ ಕೈ ಜೋಡಿಸಿದಾಗ ದೇಶವನ್ನು ಸಂಪೂರ್ಣ ಸ್ವಚ್ಛತೆಯತ್ತ ಕೊಂಡೊಯ್ಯಲು ಸಾಧ್ಯವಿದೆ ಎಂದು ತಿಳಿಸಿದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ ಪ್ರಾಸ್ತವಿಕವಾಗಿ ಮಾತನಾಡಿದರು.
ಕಳೆದ ವಾರ ಈ ಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿದ್ದಾಗ ಈ ಪ್ರಯಾಣಿಕರ ತಂಗುದಾಣ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿತ್ತು. ಎಲ್ಲರೂ ಸೇರಿ ಸ್ವಚ್ಛತೆಯನ್ನು ಮಾಡಿದ್ದೇವು. ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಪ್ರಯಾಣಿಕರ ತಂಗುದಾಣವನ್ನು ನವೀಕರಿಸಿದ್ದಾರೆ ಎಂದರು.
ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷ ಮಂಜುನಾಥ ಆಚಾರ್ಯ ಅನಿಸಿಕೆ ವ್ಯಕ್ತಪಡಿಸಿದರು. ಪುರಸಭಾ ಸದಸ್ಯ ಗೋವಿಂದ ಪ್ರಭು, ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಆರೋಗ್ಯಾಧಿಕಾರಿ ಮತ್ತಡಿ, ಇಂಜಿನಿಯರ್ ಇಕ್ಬಾಲ್, ಜೇಸಿಐ ಬಂಟ್ವಾಳದ ಕಾರ್ಯದರ್ಶಿ ಉಮೇಶ್ ಆರ್ ಮೂಲ್ಯ ಕೋಶಾಧಿಕಾರಿ ಉಮೇಶ್ ಮಾರ್ನಬೈಲು, ಸದಸ್ಯರಾದ ಸಂತೋಷ್ ಜೈನ್, ದೀಪಕ್ ಸಾಲ್ಯಾನ್, ವೆಂಕಟೇಶ್ ಕೃಷ್ಣಾಪುರ, ಶ್ರೀನಿವಾಸ್ ಅರ್ಬಿಗುಡ್ಡೆ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ಪದಾಧಿಕಾರಿಗಳಾದ ವೆಂಕಟೇಶ ಬಂಟ್ವಾಳ್, ಸಂದೀಪ್ ಸಾಲ್ಯಾನ್, ಮೌನೇಶ್ ವಿಶ್ವಕರ್ಮ, ಯಾದವ ಅಗ್ರಬೈಲ್, ಚಂದ್ರಶೇಖರ ಕಲ್ಮಲೆ, ಶರತ್ ಆಲಾಡಿ, ಟ್ರಾಫಿಕ್ ಎಎಸೈ ಬಾಲಕೃಷ್ಣ ಗೌಡ, ರೋಟರಿ ಕಾರ್ಯದರ್ಶಿ ಶಿವಾನಿ ಬಾಳಿಗ, ಕೋಶಾಧಿಕಾರಿ ವಲ್ಲಭೇಶ್ ಶೆಣೈ ಸದಸ್ಯರಾದ ಕರುಣಾಕರ ರೈ, ಮೇಘಾ ಆಚಾರ್ಯ, ಬಸ್ತಿ ಮಾಧವ ಶೆಣೈ, ಹರೀಶ್ ಬಾಳಿಗ, ಮಹಮ್ಮದ್ ಇಕ್ಬಾಲ್, ರಾಮಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೇಸಿಐ ಬಂಟ್ವಾಳದ ನಿಕಟಪೂರ್ವ ಅಧ್ಯಕ್ಷ ಡಾ. ಬಾಲಕೃಷ್ಣ ಕುಮಾರ್ ವಂದಿಸಿದರು.
ಬಡ್ಡಕಟ್ಟೆ ಬಸ್ಸುನಿಲ್ದಾಣಕ್ಕೆ ಇಂಟರ್‌ಲಾಕ್ ಅಳವಡಿಕೆ, ರಿಕ್ಷಾ ಹಾಗೂ ಖಾಸಗಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಶಾಸಕ ರಾಜೇಶ್ ನಾಯ್ಕ್ ಪುರಸಭಾಧಿಕಾರಿಗಳಿಗೆ ತಿಳಿಸಿದರು.